ಬಂಟ್ವಾಳ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ದಕ್ಷಿಣ ಕನ್ನಡ, ಯು.ಎನ್.ಡಿ.ಪಿ ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆ, ವತಿಯಿಂದ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಪಂಚಾಯತ್‌ನಲ್ಲಿ ಶ್ರೀ ಶಕ್ತಿ ಮತ್ತು ಸ್ವ-ಸಹಾಯ ಸದಸ್ಯರಿಗೆ ಸ್ವ-ಉದ್ಯೋಗ, ಉದ್ಯಮಶೀಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ದಿನಗಳ ಕೌಶಲ್ಯ ತರಬೇತಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಶ್ರೀಮತಿ ಗಾಯತ್ರಿ ಬಾಯಿ ಸಿಡಿಪಿಒ, ಪ್ರವೀಣ್.ಬಿ,ಅಧ್ಯಕ್ಷರು ತುಂಬೆ ಗ್ರಾಮ ಪಂಚಾಯತಿ, ಚಂದ್ರಾವತಿ,ಪಿಡಿಒ ತುಂಬೆ ಗ್ರಾ.ಪಂ, ಜಯಂತಿ ಕೇಶವ್ ಉಪಾಧ್ಯಕ್ಷೆ ಶಿವಕುಮಾರ ಸ್ವಾಮಿ ಜಿಲ್ಲಾ ಸಂಯೋಜಕರು ಯುಎನ್‌ಡಿಪಿ, ದೀಕ್ಷಾ ಸಮುದಾಯ ಸಂಯೋಜಕಿ ಯುಎನ್‌ಡಿಪಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಪ್ರವೀಣ್ ಬಿ ಮಾತನಾಡಿ,ಮಹಿಳೆಯರಿಗೆ ಸ್ವಾ ಉದ್ಯೋಗ, ಲಭ್ಯವಿರುವ ಸರ್ಕಾರದ ಸಾಲಗಳ ಬಳಕೆ ಮತ್ತು ಪಂಚಾಯತಿಯಿಂದ ದೊರೆಯುವ ಸವಲತ್ತುಗಳನ್ನು ಬಳಸಿಕೊಳ್ಳುವ ಕುರಿತು ಹಾಗೂ ಎರಡು ದಿನಗಳ ಪ್ರಾಜೆಕ್ಟ್ ಕೋಡ್ ಉನ್ನತಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಿರಿ
ಎಂದು ಹೇಳಿದರು.
ಶಿವಕುಮಾರ್ ಪ್ರಾಜೆಕ್ಟ್ ಕೋಡ್ ಉನ್ನತಿ ಕಾರ್ಯಕ್ರಮ, ಕುಟುಂಬದಲ್ಲಿ ಮಹಿಳೆಯರ ಪಾತ್ರ, ಮಹಿಳೆಯರು ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದಾದ ಕ್ಷೇತ್ರಗಳ ಕುರಿತು ಮಾತನಾಡಿದರು.
ಗಾಯತ್ರಿ ಸಿಡಿಪಿಒ ಅವರು ಸ್ವ-ಸಹಾಯಗಳು ಗುಂಪುಗಳು ಉಳಿತಾಯ ಮತ್ತು ಸಾಲಕ್ಕೆ ಸೀಮಿತವಾಗಿರಬಾರದು ಬದಲಿಗೆ ಮಹಿಳೆಯರಿಗೆ ಕಿರು ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುವ ಕುರಿತು ಮಾತನಾಡಿದರು.
ಸುಜಾತಾ ಡಬ್ಲ್ಯುಸಿಡಿ ಮೇಲ್ವಿಚಾರಕರು ಮತ್ತು ಪ್ರಭಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಶಿಕಲಾ ಎಂಬಿಕೆ ಮತ್ತು ಮಾಲತಿ ಎಲ್ ಸಿ ಆರ್ ಪಿ ಹಾಗೂ ವಿವಿಧ ಸ್ವ-ಸಹಾಯ ಗುಂಪಿನ 57 ಮಹಿಳೆಯರು ಭಾಗವಹಿಸಿದ್ದರು.














