ಬಂಟ್ವಾಳ : ಬಂಟ್ವಾಳ ತಾ. ಉಳಿ ಗ್ರಾ.ಪಂ.ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ 75 ವರ್ಷಕ್ಕಿಂತ ಮೇಲ್ಪಟ್ಟ 90 ಮಂದಿ ಹಿರಿಯ ನಾಗರಿಕರಿಗೆ ಸಮ್ಮಾನ ಕಾರ್ಯಕ್ರಮ ಗ್ರಾ.ಪಂ.ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಹಿರಿಯ ನಾಗರಿಕರನ್ನು ಸಮ್ಮಾನಿಸಿ ಶುಭ ಹಾರೈಸಿದರು.
ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಸಂತ
ಸಾಲ್ಯಾನ್ ರಾಮನಗರ, ಚೇತನ್ ಊರ್ದೊಟ್ಟು, ರೇವತಿ ಮುದಲಾಡಿ, ಗುಲಾಬಿ ಮಾಡೋಡಿ, ವಿಶಾಲಾಕ್ಷಿ ಸುದೇಕಾರು, ರಕ್ಷಿತಾ ಮಾಡೋಡಿ, ಶಾಂತಾ ಜಾರಿಗೆ , ಶಾರದ ಕೊಡಂಗೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಮತ್ತು ಸಿಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು















