Coastal Bulletin

ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇದರ ವತಿಯಿಂದ ಅ 14ರಂದು ಕೆಸರ್ಡೊಂಜಿ ದಿನ ಕಾರ್ಯಕ್ರಮ ನಾಯಿಲದ ಬೆಟ್ಟುಗದ್ದೆಯಲ್ಲಿ ನಡೆಯಿತು.

ನರಿಕೊಂಬು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೇಟ್ಟು ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

.ಪಂಚಾಯತ್ ಅಧ್ಯಕ್ಷೆ ವಿನುತ ಪುರುಷೋತ್ತಮ ಗ್ರಾ.ಸದಸ್ಯರಾದ ಅರುಣ್ ಬೋರುಗುಡ್ಡೆ, ವಿಶಾಲಾಕ್ಷಿ ,ಪುರುಷೋತ್ತಮ, ಮಮತಾಸುಧೀರ‍, ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ , ಕುಲಾಲಸಂಘದ ಅಧ್ಯಕ್ಷ ಕೃಷ್ಣ ಕುಲಾಲ್, ಬಿಲ್ಲವ ಸಂಘದ ಉಪಾಧ್ಯಕ್ಷ ಸಂಜೀವ ಪೂಜಾರಿ ನಾಟಿ ,ಉದ್ಯಮಿ ಗಳಾದ

ಉಮೇಶ್ ನೆಲ್ಲಿಗುಡ್ಡೆ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಪ್ರಸಾದ್ ಮರ್ದೋಳಿ ,ರಾಜೇಶ್ ಜೀವಿತಾ, ಮಾಧವ ಕುಲಾಲ್ ಶೇಡಿಗುರಿ ,ಅಶೋಕ್ ಮರ್ದೋಳಿ ,ಮಹೇಶ್ ಮರ್ದೋಳಿ ಮತ್ತಿತರರು ಉಪಸ್ಥಿತರಿದ್ದರು .

ಊರಿನ ಮಹಿಳೆಯರನ್ನು ಮತ್ತು ಸಂಘದ ಸದಸ್ಯರುಗಳನ್ನು 4ತಂಡಗಳಾಗಿ ರಚಿಸಿ ವಿವಿಧ ಕ್ರೀಡಾಕೂಟಗಳನ್ನು ಮಾಡಲಾಯಿತು. ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

Leave a Comment