Coastal Bulletin

ಬಂಟ್ವಾಳ : ಕ್ಯಾಂಪ್ಕೋ ಸಂಸ್ಥೆಯ ಮಂಚಿ ಶಾಖೆಯಲ್ಲಿ ಕಾಳು ಮೆಣಸು ಖರೀದಿಯ ಉದ್ಘಾಟನೆಯನ್ನು ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರೂ ಆಗಿರುವ ಶ್ರೀ ಎಸ್.ಆರ್. ಸತೀಶ್ಚಂದ್ರ ಅವರು ಮೇ 16ರಂದು ಸೋಮವಾರ ನೆರವೇರಿಸಿದರು.

ಪಾಣೆಮಂಗಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಕ್ಯಾಂಪ್ಕೋದ ಸದಸ್ಯರಾದ ಶ್ರೀನಿವಾಸ್ ಭಟ್ ಅವರಿಂದ ಮೊದಲ ಕಾಳು ಮೆಣಸು ಖರೀದಿಸಲಾಯಿತು.

ಈ ಸಂದರ್ಭದಲ್ಲಿ ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ

ಶ್ರೀ ಬಿ ಉಮ್ಮರ್, ಆಡಳಿತ ಹಾಗೂ ಸಿಬ್ಬಂದಿ ವರ್ಗ, ಮಂಚಿ ಕ್ಯಾಂಪ್ಕೋ ಸಂಸ್ಥೆಯ ಶಾಖಾಧಿಕಾರಿ ಶಿವಾನಂದ ಕಣ್ವತೀರ್ಥ ಮತ್ತು ಸಿಬ್ಬಂದಿಗಳು, ಕ್ಯಾಂಪ್ಕೋ ಸದಸ್ಯರು, ಉಪಸ್ಥಿತರಿದ್ದರು.

ಕಾಳು ಮೆಣಸು ವಿಭಾಗಾಧಿಕಾರಿ ನಿತಿನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment