Coastal Bulletin

ಬಂಟ್ವಾಳ :ತುಂಬೆ, ಪುದು, ಕೊಡ್ಮಾಣ್, ಮೆರಮಜಲು, ಅಡ್ಯಾರ್ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಕುಲಾಲ ಸುಧಾರಕ ಸಂಘ (ರಿ)ಫರಂಗಿಪೇಟೆ ಇದರ 29ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವವು ಮೇ 22ರಂದು ಆದಿತ್ಯವಾರ ಮಾರಿಪಳ್ಳ,ನಾಣ್ಯದಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಅ ದಿನ ಬೆಳಿಗ್ಗೆ 8ಗಂಟೆಗೆ ಗಣಹೋಮ ನಡೆದು,10ರಿಂದ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ.ಸುಂದರ ಕುಲಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.ಮದ್ಯಾಹ್ನ 12ರಿಂದ ವಾರ್ಷಿಕ ಮಹಾ ಸಭೆ ನಡೆದು ಬಳಿಕ ಸಹ ಭೋಜನ ನಡೆಯಲಿದೆ. ನಂತರ ಸಂಗೀತ ಸ್ಪರ್ಧೆ ನಡೆಯಲಿದೆ.

ಸಂಜೆ 4ಗಂಟೆಗೆ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ನಾರಾಯಣ ವಹಿಸಲಿದ್ದು, ಮಯೂರ್ ಉಳ್ಳಾಲ್,ನಾರಾಯಣ ಸಿ ಪೆರ್ನೆ,ಪುಂಡರಿಕಾಕ್ಷ ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ

ನಾರಾಯಣ ಬಂಗೇರ ನಾಣ್ಯ, ಅರುಣ್ ಚಂದ್ರ ಬಿ ಸಿ ರೋಡ್, ನಿತಿನ್ ತುಂಬೆ ಇವರು ಸನ್ಮಾನಗೊಳ್ಳಲಿದ್ದು, ವೀಣಾ ಪದ್ಮನಾಭ ಗೋವಿಂದೊಟ, ಜೀವನ್ ಕುಲಾಲ್ ಕೋಡಿ ಇವರಿಗೆ ಅಭಿನಂದನಾ ಕಾರ್ಯಕ್ರಮವಿದೆ ಹಾಗೂ ವಿದ್ಯಾರ್ಥಿಗಳಿಗೆ,ಪ್ರತಿಭಾ ಪುರಸ್ಕಾರ,ವಿದ್ಯಾ ಪ್ರೋತ್ಸಾಹ ಧನ ನೀಡಲಾಗುವುದು.

ಸಭಾ ಕಾರ್ಯಕ್ರಮದ ನಂತರ ಕುಲಾಲ ಸಂಘದ ಸದಸ್ಯೆಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Comment