ಬಂಟ್ವಾಳ :ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ನಿಯಮಿತ ಬಂಟ್ವಾಳ ದ ಕ ಇದರ ಅಧ್ಯಕ್ಷರಾಗಿರುವ ಕೆ ರವೀಂದ್ರ ಕಂಬಳಿಯವರು 71 ನೇ ಅಖಿಲ ಭಾರತ ಸಹಕಾರ ಸಪ್ತಾಹ ದ ಸಮಾರಂಭದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಗೆ ಆಯ್ಕೆಯಾಗಿರುತ್ತಾರೆ .
ಹುಬ್ಬಳ್ಳಿ ಯ ತೋಟಗಾರಿಕೆ ವಿಶ್ವ ವಿದ್ಯಾಲಯದ ಮೈದಾನದಲ್ಲಿ ನ.17ರಂದು ಮಾನ್ಯ ಮುಖ್ಯಮಂತ್ರಿ ಯವರು ಪ್ರಶಸ್ತಿ ಪ್ರದಾನ ಮಾಡಲಿರುವರು.
ಕೆ ರವೀಂದ್ರ ಕಂಬಳಿಯವರು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಸೇವೆ
ಸಲ್ಲಿಸಿರುತ್ತಾರೆ , ಪುದು ಮಂಡಲ ಪಂಚಾಯತ್ ಪ್ರಧಾನರಾಗಿ ಸೇವೆ ಸಲ್ಲಿಸಿರುತ್ತಾರೆ , ಪ್ರಸ್ತುತ ದ .ಕ ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರ ಸಂಘ ನಿಯಮಿತ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ















