ಪೊನ್ನೊಡಿ: ಭಕ್ತ ವೃಂದದ ಅಶ್ರಯದಲ್ಲಿ ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ ಕಾರ್ಯಕ್ರಮ. ಸಮಾಜಮುಖಿ ಕಾರ್ಯದ ಮೂಲಕ ಮಾದರಿಯಾದ ತರುಣರ ತಂಡ.

Coastal Bulletin
ಪೊನ್ನೊಡಿ: ಭಕ್ತ ವೃಂದದ ಅಶ್ರಯದಲ್ಲಿ ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ ಕಾರ್ಯಕ್ರಮ. ಸಮಾಜಮುಖಿ ಕಾರ್ಯದ ಮೂಲಕ ಮಾದರಿಯಾದ ತರುಣರ ತಂಡ.

ಬಂಟ್ವಾಳ :ತಾಲೂಕಿನ ಕೊಡ್ಮಾಣ್ ಗ್ರಾಮದ ಪೊನ್ನೊಡಿ ಪರಿಸರದಲ್ಲಿ ಕಳೆದ ಹಲವಾರು ವರುಷಗಳಿಂದ ಅನಾರೋಗ್ಯ ಪೀಡಿತರಿಗೆ, ಬಡವರಿಗೆ ಆರ್ಥಿಕ ಸಹಾಯ, ಕೊರೋನ ಕಾಲದಲ್ಲಿ ಆಹಾರದ ಕಿಟ್ ವಿತರಣೆ ಹೀಗೆ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಭಕ್ತ ವೃಂದ ಪೊನ್ನೊಡಿ ಎಂಬ ತರುಣರ ತಂಡವು ಇದೀಗ ಸ್ಥಳೀಯರಾದ ಸುಜಾತ ಶೆಟ್ಟಿ ಎಂಬ ಬಡ ಕುಟುಂಬಕ್ಕೆ ಸುಮರು 15ಲಕ್ಷ ರೂ ವೆಚ್ಚದಲ್ಲಿ ದಾನಿಗಳ ಸಹಕಾರದಲ್ಲಿ ನೂತನ ಮನೆಯನ್ನು ನಿರ್ಮಿಸಿ ಹಸ್ತಾಂತರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗುವ ಕಾರ್ಯವನ್ನು ಮಾಡಿ, ಸಂಘಟನೆಯ ಮಾರ್ಗದರ್ಶಕರಾದ ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿಯವರು ಕಂಡ ಕನಸನ್ನು ಸಕಾರಗೊಳಿಸಿದ್ದಾರೆ.

ಶ್ರೀ ವಿವೇಕ ಚೈತನ್ಯನಂದ ಸ್ವಾಮೀಜಿ ರಾಮಕೃಷ್ಣ ತಪೋವನ ಪೊಳಲಿ ಇವರು ನೂತನ ಮನೆ "ಬ್ರಾಮರಿ"ಯನ್ನು ಸುಜಾತ ಶೆಟ್ಟಿ ಕುಟುಂಬಕ್ಕೆ ಬಾರತ ಮಾತೆಯ ಬಾವಚಿತ್ರವನ್ನು ನೀಡುವ ಮೂಲಕ ನ. 14ರಂದು ಹಸ್ತಾಂತರಿಸಿದರು.


ಬಳಿಕ ಆಶೀರ್ವಾಚನ ನೀಡಿ,ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಮಾನವ ಧರ್ಮ,ಈ ದೇಶದಲ್ಲಿ ದಾನ ಧರ್ಮ ಮಾಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿ, ಆ ದಿಕ್ಕಿನಲ್ಲಿ ಇಲ್ಲಿಯ ಭಕ್ತವೃಂದದ ಕಾರ್ಯಕರ್ತರ ಮತ್ತು ಹಿತೈಷಿಗಳ ಕಾರ್ಯ ಶ್ಲಾಘನೀಯ,ಈ ಮನೆಯು ನೆಮ್ಮದಿಯ ತಾಣವಾಗಿ ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಮನೆಯಾಗಲಿ

ಎಂದು ಹೇಳಿದರು.


ಈ ಸಂದರ್ಭದಲ್ಲಿ ಅರ್ ಎಸ್ ಎಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್ ಸುಳ್ಯ ಶುಭ ಹಾರೈಸಿದರು,, ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್ ವಿನೋದ್ ಕೊಡ್ಮಾಣ್, ಮಾನ್ಯ ತಾಲೂಕು ಸಂಘ ಚಾಲಕರಾದ ಡಾ. ಬಾಲಕೃಷ್ಣ ಗ್ರಾಮಾಂತರ ಜಿಲ್ಲಾ ಸಹಕಾರ್ಯವಾಹ ಚೇತನ್ ಕಡೇಶಿವಾಲಯ, ಜಿಲ್ಲಾ ಸೇವಾ ಪ್ರಮುಖ್ ಜಗದೀಶ್ ಬಜಪೆ, ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ್ ಕೊಡ್ಮಾಣ್ ಕೊಡಿ,ಜಿಲ್ಲಾ ಗ್ರಾಮ ವಿಕಾಸ ಸಂಯೊಜಕ ಸುಜೀತ್ ಕಲ್ಲಡ್ಕ ಸಹಿತ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತತರಿದ್ದರು.

Leave a Comment