Coastal Bulletin

ಬಜ್ಪೆ : ಡಿ.ಡಿ.ಯು.ಜಿ.ಕೆ.ವೈ ಯೋಜನೆಯಡಿಯಲ್ಲಿ ಸಮ್ವಿತ್ ಎಜುಕೇಶನ್ ಟ್ರಸ್ಟ್ ಮಂಗಳೂರು, ಕರ್ನಾಟಕ ರಾಜ್ಯ ಹಾಗೂ ಭಾರತ ಸರಕಾರದ ಸಹಯೋಗದೊಂದಿಗೆ ಉಚಿತ ತರಬೇತಿ ಉದ್ಯೋಗ ಖಾತರಿಗಳನ್ನು ಬಜ್ಪೆಯ ಶ್ರೀ ನಿರಂಜನ ಸ್ವಾಮಿ ಶಾಲಾ ವಠಾರದಲ್ಲಿ ನಡೆಸಿಕೊಡಲಾಗುತ್ತದೆ.

ಈ ಉಚಿತ ತರಬೇತಿಯಲ್ಲಿ  ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ಐದು ತಿಂಗಳಿನ ಫ್ರಂಟ್‌ ಆಫೀಸ್ ಎಕ್ಸಿಕ್ಯುಟಿವ್ ಮತ್ತು ಅಸೋಸಿಯೇಟ್ ಕೋರ್ಸ್ ಲಭ್ಯವಿದೆ. ಹಾಗೂ ಎಸ್.ಎಸ್.ಎಲ್.ಸಿ ಆದವರಿಗೆ ನಾಲ್ಕು ತಿಂಗಳಿನ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸ್

ಕೂಡ ಇದೆ.

ಈ ಕೋರ್ಸ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ ಮತ್ತು ತರಬೇತಿ ನೀಡಲಾಗುತ್ತದೆ.

ಉಚಿತ ಇಂಗ್ಲಿಷ್, ಕಂಪ್ಯೂಟರ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕೊಡಲಾಗುವುದು.

ಆಕರ್ಷಕ ವೇತನದೊಂದಿಗೆ ಖಾಸಗಿ ವಲಯದಲ್ಲಿ ಖಾತರಿ ಉದ್ಯೋಗ ನೀಡಲಾಗುವುದು.

Leave a Comment