ಬಂಟ್ವಾಳ :ವಾತ್ಸಲ್ಯ ಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಬಾಳ್ತಿಲ ಇದರ ಆಶ್ರಯದಲ್ಲಿ ಶ್ರೀಮತಿ ಗಿರಿಜಾ ಸುವರ್ಣರವರ ಸ್ಮರಣಾರ್ಥ, "ಹೆಣ್ಣು ಮಗುವಿನ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ ಮತ್ತು ಸಾಧಕ ಮಹಿಳೆಯರಿಗೆ ರಾಜ್ಯ ಗಿರಿಜಾ ರತ್ನ ಪ್ರಶಸ್ತಿ ಪ್ರದಾನ"ಸಮಾರಂಭ ಹಾಗೂ ಗಿಡ ನೆಡುವ ಕಾರ್ಯಕ್ರಮ ಸೆ.18ರಂದು ಮಧ್ಯಾಹ್ನ 3ರಿಂದ ಬಾಳ್ತಿಲ ಗ್ರಾಮದ ಶ್ರೀ ಶೈಲದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು ಶೈಲಜಾ ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














