Coastal Bulletin

ಬಂಟ್ವಾಳ: ಇಲ್ಲಿನ ಬೈಪಾಸ್ ಮುಖ್ಯವತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪರ ಹೆಸರು ಸೋಮವಾರ ಅನಾವರಣಗೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಡಾ. ಅಮ್ಮೆಂಬಳ ಬಾಳಪ್ಪರಪ್ಪರ ಜನ್ಮ ಶತಾಬ್ಧಿ ಸವಿ ನೆನೆಪಿಗಾಗಿ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಬಾಳಪ್ಪರ ಅಭಿಮಾನಿಗಳು ಈ ನಾಮಕರಣ ಗೊಳಿಸಿದ್ದಾರೆ.

ಛಾಯಾಗ್ರಹಕಾರ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಯುವ ವೇದಿಕೆ ಸ್ಥಾಪಕ ಸದಸ್ಯ ದೇವಪ್ಪ ಪಂಜಿಕಲ್ಲು, ಅಧ್ಯಕ್ಷ ಸಂತೋಷ್ ಮರ್ತಾಜೆ, ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಪ್ರಮುಖರಾದ ವೆಂಕಪ್ಪ ಪೂಜಾರಿ, ಉದ್ಯಮಿ ಕೇಶವ ಬಾಳೆಹಿತ್ಲು, ಉಮೇಶ್ ಮೂಲ್ಯ,ರಮೇಶ್

ಬಾಳೆಹಿತ್ಲು, ಸುಂದರ ಕುಲಾಲ್, ವಿಠಲ ಪಲ್ಲಿಕಂಡ, ನಿತೀಶ್ ಪಲ್ಲಿಕಂಡ ಸೋಮನಾಥ ಸಾಲ್ಯಾನ್, ಮಾಧವ ಬಿ.ಸಿ ರೋಡ್,ಹೆಚ್ ಕೆ ನೈನಾಡು ವಿತೇಷ್ ಕಾಮಾಜೆ, ಅಶೋಕ್ ಟೈಲರ್,ಗಣೇಶ್ ಕಾಮಾಜೆ,ನಾಗೇಶ್ ಬಾಳೆಹಿತ್ಲು ರವಿ ನೇರಂಬೊಳ್ ಮತ್ತಿತರರು ಉಪಸ್ಥಿತರಿದ್ದರು.

Leave a Comment