Coastal Bulletin

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯೋರ್ವರನ್ನು ಸ್ಟ್ರೆಚರ್ ಅಲ್ಲಿ ಎತ್ತಿಕೊಂಡು ಹೋದ ಘಟನೆಯೊಂದು ವರದಿಯಾಗಿದೆ.

ಜಾಲ್ಸೂರಿನ ಮರಸಂಕ ಎಂಬಲ್ಲಿನ ನಿವಾಸಿ ದೇವಕಿಯವರು ಮನೆಯಲ್ಲಿ ಕಾಲು ಜಾರಿ ಬಿದ್ದು, ಕಾಲು ಮುರಿತಕ್ಕೊಳಗಾಗಿದ್ದರು. ಆದರೆ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದರೆ ಮರಸಂಕದಲ್ಲಿರುವ ಕಿರುನದಿಯನ್ನು ದಾಟಿ ಹೋಗಬೇಕು. ಈ ನದಿಗೆ ಸೇತುವೆಯೇ ಇಲ್ಲ. ಆದ್ದರಿಂದ ತುಂಬಿ ಹರಿಯುವ ಹೊಳೆಯನ್ನೇ

ದಾಟಿ ಹೋಗಬೇಕು. ಹೀಗಾಗಿ ತುಂಬಿ ಹರಿಯುವ ಹೊಳೆಯಲ್ಲಿ ದೇವಕಿಯವರನ್ನು ಸ್ಥಳೀಯರು ಸ್ಟ್ರೆಚರ್ ಅಲ್ಲಿ ಹೊತ್ತುಕೊಂಡು ಹೋದರು. ಬಳಿಕ ಹೊಳೆ ದಾಟಿ ಆಂಬ್ಯುಲೆನ್ಸ್ ಅಲ್ಲಿ ಆಸ್ಪತ್ರೆಗೆ ಸಾಗಿಸಿದರು. ಇದು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ನಡೆದಿರುವ ಘಟನೆಯಾಗಿದೆ.

Leave a Comment