Coastal Bulletin

ಬಂಟ್ವಾಳ: ಗ್ರಾಮ .ಪಂಚಾಯತ್ ನ 2 ನೇ ಅವಧಿಗೆ ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಆಯ್ಕೆ ಪ್ರಕ್ರಿಯೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರ ನೇತ್ರತ್ವದಲ್ಲಿ ಬಿಸಿರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ಇಂದು ನಡೆದ ಮೀಸಲಾತಿ ಆಯ್ಕೆ ಪ್ರಕ್ರಿಯೆ ತಾಲೂಕಿನ ಒಟ್ಟು 51 ಗ್ರಾ.ಪಂಗಳ ಮೀಸಲಾತಿ ಪ್ರಕಟವಾಯಿತು.

ನೆಟ್ಲಮುಡ್ನೂರು ಹಾಗೂ ಸರಪಾಡಿ ಗ್ರಾಮಪಂಚಾಯತ್ ನ ಎರಡನೇ ಅವಧಿಯ ಮೀಸಲಾತಿಯ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆಯಿತು.

ನೆಟ್ಲಮುಡ್ನೂರು ಗ್ರಾ.ಪಂ.ನ ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ. ಮಹಿಳೆ ಮೀಸಲಾತಿ ಬಂದಿದ್ದು, ಸರಪಾಡಿ ಗ್ರಾ.ಪಂ.ನ ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ.ಮಹಿಳೆ ಎರಡು ಗ್ರಾಮಪಂಚಾಯತ್ ನಲ್ಲಿ ಹಿಂದುಳಿದ ವರ್ಗ ಬಿ.ಮಹಿಳಾ ಸದಸ್ಯರು ಇಲ್ಲ ಎಂಬ ವಿಚಾರ ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಪ್ರಸ್ತಾಪವಾಗಿದ್ದಲ್ಲದೆ, ಕೆಲ ಹೊತ್ತು ಚರ್ಚೆಗೆ ಕಾರಣವಾಯಿತು.

ಗ್ರಾಮಪಂಚಾಯತ್ ನ ಎರಡನೇ ಅವಧಿಗೆ ಮೀಸಲಾತಿ ಆಯ್ಕೆಯಾಗಿರುವ ಪಟ್ಟಿಯನ್ನು ಅಧಿಕಾರಿಗಳು ಸ್ಥಳೀಯ ಗ್ರಾ.ಪಂ.ಗಳಿಗೆ ಕಳುಹಿಸಿಕೊಡಲಾಗುವುದು.

ಗ್ರಾ.ಪಂ.ನ ಪಿಡಿಒ ಗಳು ಈ ಮೀಸಲಾತಿ ಪಟ್ಟಿಯಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಅಂತಹ ಮೀಸಲಾತಿ ವಿಚಾರವನ್ನು ಜಿಲ್ಲಾಧಿಕಾರಿ ಅವರಿಗೆ ವರದಿ ಮೂಲಕ ಕಳುಹಿಸಿಕೊಡಲಾಗುವುದು.

ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದ ಬಳಿಕ ವ್ಯತ್ಯಾಸಗಳು ಕಂಡುಬಂದಲ್ಲಿ ಮೀಸಲಾತಿ ವ್ಯತ್ಯಾಸ ಸರಿಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುತ್ತದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳುವ ಅವಕಾಶವಿದೆ.

ತಾಲೂಕಿನ 51 ಗ್ರಾ.ಪಂಗಳ ಮೀಸಲಾತಿ ಪಟ್ಟಿ ಇಲ್ಲಿವೆ

1.ಸಂಗಬೆಟ್ಟು ಅಧ್ಯಕ್ಷ – ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.

2.ಕುಕ್ಕಿಪ್ಪಾಡಿ ಅಧ್ಯಕ್ಷ – ಸಾಮಾನ್ಯ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

3. ಚೆನ್ನೈತ್ತೋಡಿ ಅಧ್ಯಕ್ಷ- ಎಸ್‌ಟಿ

ಉಪಾಧ್ಯಕ್ಷ- ಹಿಂದುಳಿದ ವರ್ಗ ಬಿ.ಮಹಿಳೆ

4. ಪಿಲಾತಬೆಟ್ಟು ಅಧ್ಯಕ್ಷ – ಎಸ್.ಟಿ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ

5. ಇರ್ವತ್ತೂರು ಅಧ್ಯಕ್ಷ – ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಎಸ್.ಟಿ.ಮಹಿಳೆ.

6.ಕಾವಳಪಡೂರು ಅಧ್ಯಕ್ಷ – ಸಾಮಾನ್ಯ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

7.ಕಾವಳಮೂಡೂರು ಅಧ್ಯಕ್ಷ – ಸಾಮಾನ್ಯ

ಉಪಾಧ್ಯಕ್ಷ- ಹಿಂದುಳಿದ ವರ್ಗ ಬಿ.


8.ಉಳಿ ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


9.ಬಡಗಕಜೆಕಾರು ಅಧ್ಯಕ್ಷ – ಸಾಮಾನ್ಯ

ಉಪಾಧ್ಯಕ್ಷ -ಎಸ್.ಸಿ.ಮಹಿಳೆ


10.ಸರಪಾಡಿ ಅಧ್ಯಕ್ಷ – ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ಬಿ.ಮಹಿಳೆ


11.ಮಣಿನಾಲ್ಕೂರು ಅಧ್ಯಕ್ಷ- ಎಸ್.ಟಿ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


12.ನಾವೂರು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


13.ಪಂಜಿಕಲ್ಲು ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ – ಹಿಂದುಳಿದ ವರ್ಗ ಎ.


14.ಅಮ್ಟಾಡಿ ಅಧ್ಯಕ್ಷ- ಹಿಂದುಳಿದ ವರ್ಗ ಎ.

ಉಪಾಧ್ಯಕ್ಷ- ಎಸ್.ಟಿ.ಮಹಿಳೆ


15.ರಾಯಿ ಅಧ್ಯಕ್ಷ – ಹಿಂದುಳಿದ ವರ್ಗ ಎ.

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


16.ಅರಳ ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ – ಹಿಂದುಳಿದ ವರ್ಗ ಎ.


17.ಬಡಗಬೆಳ್ಳೂರು ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


18.ಕರಿಯಂಗಳ ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ – ಸಾಮಾನ್ಯ


19.ಅಮ್ಮುಂಜೆ ಅಧ್ಯಕ್ಷ- ಎಸ್.ಸಿ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


20.ಮೇರೆಮಜಲು ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ

-ಎಸ್.ಸಿ.ಮಹಿಳೆ


21.ತುಂಬೆ ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ


22.ಕಳ್ಳಿಗೆ ಅಧ್ಯಕ್ಷ – ಸಾಮಾನ್ಯ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


23.ನರಿಕೊಂಬು ಅಧ್ಯಕ್ಷ – ಹಿಂದುಳಿದ ವರ್ಗ ಎ.

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


24.ಬಾಳ್ತಿಲ ಅಧ್ಯಕ್ಷ- ಹಿಂದುಳಿದ ವರ್ಗ ಎ

ಉಪಾಧ್ಯಕ್ಷ – ಸಾಮಾನ್ಯ ‌ಮಹಿಳೆ


25.ಕಡೇಶಿವಾಲಯ ಅಧ್ಯಕ್ಷ – ಹಿಂದುಳಿದ ವರ್ಗ ಎ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


26.ಬರಿಮಾರು ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


27.ಗೋಳ್ತಮಜಲು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

ಉಪಾಧ್ಯಕ್ಷ – ಸಾಮಾನ್ಯ


28.ಸಜೀಪ ಮುನ್ನೂರು ಅಧ್ಯಕ್ಷ- ಎಸ್.ಸಿ.

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


29.ಸಜೀಪ ಮೂಡ ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ


30.ಮಂಚಿ ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ


31.ವೀರಕಂಭ ಅಧ್ಯಕ್ಷ – ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ


32.ಬೋಳಂತೂರು ಅಧ್ಯಕ್ಷ – ಎಸ್.ಸಿ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


33.ಮಾಣಿ ಅಧ್ಯಕ್ಷ – ಸಾಮಾನ್ಯ

ಉಪಾಧ್ಯಕ್ಷ – ಸಾಮಾನ್ಯ ಮಹಿಳೆ


34.ಪೆರಾಜೆ ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


35.ನೆಟ್ಲ ಮುಡ್ನೂರು ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ

ಉಪಾಧ್ಯಕ್ಷ -ಸಾಮಾನ್ಯ


36.ಅನಂತಾಡಿ ಅಧ್ಯಕ್ಷ – ಸಾಮಾನ್ಯ ಮಹಿಳೆ.

ಉಪಾಧ್ಯಕ್ಷ ಸಾಮಾನ್ಯ


37.ಕೆದಿಲ ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


38.ಪೆರ್ನೆ ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ‌.

ಉಪಾಧ್ಯಕ್ಷ -ಎಸ್‌ಟಿ


39.ಇಡ್ಕಿದು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


40.ವಿಟ್ಲ ಮುಡ್ನೂರು ಅಧ್ಯಕ್ಷ- ಹಿಂದುಳಿದ ವರ್ಗ ಬಿ.

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ


41.ವಿಟ್ಲ ಪಡ್ನೂರು ಅಧ್ಯಕ್ಷ – ಹಿಂದುಳಿದ ವರ್ಗ ಎ.

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.


42.ಕೊಳ್ನಾಡು ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ


43.ಸಾಲೆತ್ತೂರು ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.


44.ಕರೋಪಾಡಿ ಅಧ್ಯಕ್ಷ -ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.


45.ಕನ್ಯಾನ ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


46.ಪೆರುವಾರಿ ಅಧ್ಯಕ್ಷ- ಹಿಂದುಳಿದ ವರ್ಗ ಎ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


47.ಮಾಣಿಲ ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಎಸ್.ಸಿ.


48.ಅಳಿಕೆ ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ


49.ಕೇಪು ಅಧ್ಯಕ್ಷ- ಹಿಂದುಳಿದ ವರ್ಗ ಎ

ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


50.ಪುಣಚ ಅಧ್ಯಕ್ಷ- ಸಾಮಾನ್ಯ ಮಹಿಳೆ

ಉಪಾಧ್ಯಕ್ಷ- ಸಾಮಾನ್ಯ


51.ಪುದು ಅಧ್ಯಕ್ಷ- ಸಾಮಾನ್ಯ

ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ


ತಹಶಿಲ್ದಾರ್ ಎಸ್ .ಬಿ.ಕೂಡಲಗಿ ,ತಾ.ಪಂ.ಇ.ಒ.ರಾಜಣ್ಣ, ಉಪತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ಮೀಸಲಾತಿ ಪ್ರಕರಟವಾಯಿತು.

ಉಪತಹಶೀಲ್ದಾರ್ ನವೀನ್ ಬೆಂಜನಪದವು, ಚುನಾವಣಾ ವಿಷಯ ನಿರ್ವಾಹಕ ಸೀತಾರಾಮ ಪೂಜಾರಿ, ಕಂದಾಯ ನಿರೀಕ್ಷಕರುಗಳಾದ ವಿಜಯ್ ಕುಮಾರ್, ಜನಾರ್ದನ,ಪ್ರಶಾಂತ್ , ಸಿಬ್ಬಂದಿಗ ಶ್ರೀಕಲಾ , ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

ಎನ್.ಐ.ಸಿ.ತಾಂತ್ರಿಕ‌ ನಿರ್ದೇಶಕ ಅಶ್ವಿನ್ ಕುಮಾರ್ ಮತ್ತು ಅವರ ತಂಡ ಚುನಾವಣಾ ತಾಂತ್ರಿಕ ಪ್ರಕ್ರಿಯೆ ನಡೆಸಿಕೊಟ್ಟರು.

Leave a Comment