Coastal Bulletin

ಬಿಪರ್ ಜಾಯ್ ಚಂಡಮಾರುತದ ಪರಿಣಾಮದಿಂದ ಭಾರತೀಯ ಹವಮಾನ ಇಲಾಖೆ ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್ ಫೋಷಣೆಯನ್ನು ಮಾಡಲಾಗಿದೆ. ಮಾತ್ರವಲ್ಲ ಕೇರಳ ಸರ್ಕಾರವು ಜೂನ್ ೯ರಿಂದ ಜುಲೈ ೩೧ ರ ವರೆಗೆ ಯಾಂತ್ರೀಕೃತ ದೋಣಿಗಳ ಟ್ರಾಲಿಂಗ್ ಅನ್ನು ನಿಷೇಧಿಸಿದೆ.

ಕಣ್ಣೂರು ಜಿಲ್ಲೆಯ ಜಿಲ್ಲಾಧಿಕಾರಿಯವರ ಕೋರಿಕೆಯಂತೆ ಕಣ್ಣೂರು ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಮೀನುಗಾರಿಕಾ ದೋಣಿಗಳನ್ನು ತಕ್ಷಣವೇ

ವಾಪಾಸ್ಸು ಕರೆಸುವಂತೆ ಹಾಗೂ ನಿಷೇಧಿತ ಅವಧಿಯಲ್ಲಿ ಮೀನುಗಾರಿಕೆ ಅನುಮತಿಸದಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧೀಕಾರಿ ರವಿಕುಮಾರ್ ಎಂ.ಆರ್ ಅವರು ನಿರ್ದೇಶನ ನೀಡಿದ್ದಾರೆ

Leave a Comment