Coastal Bulletin

ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕ ವಲಯದ ವೀರಕಂಬ ಒಕ್ಕೂಟದ ನೂತನ ಸ್ವಸಹಾಯ ಸಂಘ " ಸಿಂಧು ' ಇದರ ಉದ್ಘಾಟನಾ ಕಾರ್ಯಕ್ರಮ ವೀರಕಂಬ ಸೇವಾ ಕೇಂದ್ರದಲ್ಲಿ ಜರಗಿತು.

ವೀರಕಂಬ ಒಕ್ಕೂಟ ಅಧ್ಯಕ್ಷ ಶ್ರೀಮತಿ ಶಾಂಭವಿ ಆಚಾರ್ಯ ದೀಪ ಬೆಳಗಿಸಿ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು.

 ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣಶೆಟ್ಟಿ ನೂತನ ಸಂಘಕ್ಕೆ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿ ಸಂಘದ ನೀತಿ ನಿಯಮ ನಡವಲಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಸಂಘದ ಅಧ್ಯಕ್ಷರಾಗಿ

ಮಹಮ್ಮದ್ ಮುಸ್ತಫ, ಕಾರ್ಯದರ್ಶಿಯಾಗಿ ಶ್ರೀಯುತ ವೇಣುಗೋಪಾಲ್, ಖಜಾಜಿಯಾಗಿ ಜೀವನ್ ಆಯ್ಕೆಯಾದರು.

 ಕಾರ್ಯಕ್ರಮದಲ್ಲಿ ವೀರಕಂಬ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಪದ್ಮಾವತಿ, ಸೇವಕೇಂದ್ರದ ವಿ ಎಲ್ ಈ ಶ್ರೀಮತಿ ಸೌಮ್ಯ, ನೂತನ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

 ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ವಿಜಯ ಶೇಖರ್ ಸ್ವಾಗತಿಸಿ, ಶ್ರೀಮತಿ ಶಿವರಂಜಿನಿ ವಂದಿಸಿದರು

Leave a Comment