ದೇವಂದಬೆಟ್ಟು: ಕಳ್ಳಿಗೆ ಗ್ರಾಮದ ಯುವಕರ ಸಂಘ ಹಾಗೂ ಮಹಿಳಾ ಸಂಘ. ಎ.18ರಂದು 42 ನೇ ವಾರ್ಷಿಕೋತ್ಸವ ಸಮಾರಂಭ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ. ಸಾಧಕರಿಗೆ ಸನ್ಮಾನ.

Coastal Bulletin
ದೇವಂದಬೆಟ್ಟು: ಕಳ್ಳಿಗೆ ಗ್ರಾಮದ ಯುವಕರ ಸಂಘ ಹಾಗೂ ಮಹಿಳಾ ಸಂಘ. ಎ.18ರಂದು 42 ನೇ ವಾರ್ಷಿಕೋತ್ಸವ ಸಮಾರಂಭ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ. ಸಾಧಕರಿಗೆ ಸನ್ಮಾನ.

ಬಂಟ್ವಾಳ :ಕಳ್ಳಿಗೆ ಗ್ರಾಮದ ಯುವಕರ ಸಂಘ ಮತ್ತು ಕಳ್ಳಿಗೆ ಗ್ರಾಮದ ಮಹಿಳಾ ಸಂಘ. ದೇವಂದಬೆಟ್ಟು ಇದರ 42ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಎ.18ನೇ ಶನಿವಾರ ಸಂಜೆ 7ಕ್ಕೆ ಕನಪಾಡಿ ಕನಪಾಡಿತ್ತಾಯ ದೈವದ ಪಾತ್ರಿ ಧೂಮ ಮೂಲ್ಯ ಇವರು ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ರಾತ್ರಿ 8ರಿಂದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ

ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಬಳಿಕ  ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ,ಜಾದೂ ಪ್ರದರ್ಶನ, ಚೈತನ್ಯ ಕಲಾವಿದರು ಬೈಲೂರು ಇವರಿಂದ ಹಾಸ್ಯಮಯ ನಾಟಕ ಜರುಗಲಿದೆ  ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Comment