ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟವು ಶನಿವಾರ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ, ರಮಾನಾಥ ರೈ ಮಾತನಾಡಿ, ಸರ್ವ ಧರ್ಮೀಯರು ಪರಸ್ಪರ ಅನ್ಯೋನ್ಯತೆಯಿಂದ ಬಾಳಿ ಬದುಕಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ, ಸೌಹಾರ್ದ ಇಫ್ತಾರ್, ಕ್ರಿಸ್ಮಸ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಹೋದರ ಭಾವನೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಐಕ್ಯತೆ, ಭಾವೈಕ್ಯತೆ, ಮಾನವೀಯತೆಯೊಂದಿಗೆ ಜಗತ್ತನ್ನು ಪ್ರೀತಿಸುವ ಜತೆಗೆ ಭಗವಂತನು ಹತ್ತಿರಗೊಳಿಸುವ ಕಾರ್ಯವೇ ಹಬ್ಬಗಳ ಉದ್ದೇಶವಾಗಿದ್ದು, ಎಲ್ಲರಿಗೂ ಸಮಾನಾಗಿ ಅವಕಾಶ ನೀಡಿರುವ ಪ್ರಕೃತಿಯಲ್ಲಿ ಭಗವಂತನು ಸರ್ವ ಜೀವಸಂಕುಲಗಳಿಗೂ ಮೌಲ್ಯಗಳನ್ನು ನೀಡಿದ್ದಾನೆ. ಸಮಾಜದಲ್ಲಿ ನೊಂದವರ ಉದ್ಧಾರದ ಕಾರ್ಯದಲ್ಲಿ ರಮಾನಾಥ ರೈಯವರು ಸದಾ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚಿನ ಪ್ರಧಾನ ಧರ್ಮಗುರು ರೆ.ಫಾ.ವಿಕ್ಟರ್ ಡಿಸೋಜಾ ಮಾತನಾಡಿ, ನಮ್ಮ ಜೀವನವೇ ಧರ್ಮಗ್ರಂಥಗಳಾಗಿದ್ದು, ಅದಕ್ಕೆ ಬದ್ಧರಾಗಿ ನಾವು ಬದುಕಿದಾಗ ಸಮಾಜದಲ್ಲಿ ಸೌಹಾರ್ದತೆ ಮೂಡಲು ಸಾಧ್ಯವಿದೆ. ಧರ್ಮದ ನಿಯಮಗಳು, ತಿರುಳನ್ನು ಅರಿತುಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಮಂಗಳೂರು ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಅಪ ನಂಬಿಕೆಗಳನ್ನು ದೂರ
ಮಾಡಿ, ಸಂಬಂಧವನ್ನು ಬಲಪಡಿಸುವುದೇ ಇಫ್ತಾರ್ ಸಂಗಮದ ಉದ್ದೇಶವಾಗಿದ್ದು, ಜಾತಿ, ಧರ್ಮಗಳನ್ನು ಮೀರಿ ನಾವು ಒಟ್ಟು ಸೇರಿದಾಗ ಶಾಂತಿ-ಸಾಮರಸ್ಯದ ಸಮಾಜ ನಿರ್ಮಾಣ ಸಾಧ್ಯ ಎಂದರು.
ನೆಹರೂನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಾದ ಡಾ.ಯು.ಟಿ.ಇಫ್ತಿಕಾರ್, ಪದ್ಮರಾಜ್ ಆರ್.ಪೂಜಾರಿ, ಹರೀಶ್ ಇಂಜಾಡಿ, ಪಿಯೂಸ್ ಎಲ್. ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎಂ.ಅಬ್ಬಾಸ್ ಅಲಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಇಬ್ರಾಹಿಂ ನವಾಝ್ ಬಡಕಬೈಲ್, ಸುದೀಪ್ ಕುಮಾರ್ ಶೆಟ್ಟಿ ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಶ್ವನಿಕುಮಾರ್ ರೈ, ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಡಾ.ರಾಜಾರಾಮ್ ಕೆ.ಬಿ, ಕಾವು ಹೇಮನಾಥ ಶೆಟ್ಟಿ, ಹನೀಫ್ ಪೆರ್ಲಾಪು, ಮುಸ್ತಫಾ ಸುಳ್ಯ, ಮುಹಮ್ಮದ್ ಅಲಿ ಪುತ್ತೂರು, ವೆಂಕಪ್ಪ ಗೌಡ ಸುಳ್ಯ, ಪ್ರಶಾಂತ್ ಕಾಜವ, ಎಂ.ಶಶಿಧರ್ ಹೆಗ್ಡೆ, ವಕೀಲರಾದ ಎಂ.ಚಂದ್ರಶೇಖರ್ ಪೂಜಾರಿ, ಸುರೇಶ್ ಪೂಜಾರಿ, ಸುರೇಶ್ ನಾವೂರು, ಕೆ.ಪದ್ಮನಾಭ ರೈ, ಹೈಡಾ ಸುರೇಶ್, ಮಮತಾ ಗಟ್ಟಿ, ಎ.ಬಿ.ಅಬ್ದುಲ್ಲಾ, ನಿರಂಜನ್ ರೈ, ಸತೀಶ್ ಪೂಜಾರಿ ಕೊಪ್ಪರಿಗೆ, ಸಚಿನ್ ಬೆಳ್ಳಾರೆ, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಅಲ್ತಾಫ್ ಕುಲಾಯಿ, ಯೂಸುಫ್ ಕರಂದಾಡಿ, ಸಮದ್ ಕೈಕಂಬ, ರಿಯಾಝ್ ನೆಹರು ನಗರ, ಮೊದಲಾದವರು ಭಾಗವಹಿಸಿದ್ದರು.
ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.















