ಕೊಡ್ಮಾಣ್: ಅ.20-23,:ಶ್ರೀ ಶಾರದಾ ಪೂಜೆ ಸೇವಾ ವೇದಿಕೆ ಆಶ್ರಯದಲ್ಲಿ 35ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ,ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿ ಸಂಸ್ಮರಣೆ, "ಚೈತನ್ಯ" ಪುಸ್ತಕ ಬಿಡುಗಡೆ ಕಾರ್ಯಕ್ರಮ.

Coastal Bulletin
ಕೊಡ್ಮಾಣ್: ಅ.20-23,:ಶ್ರೀ ಶಾರದಾ ಪೂಜೆ ಸೇವಾ ವೇದಿಕೆ ಆಶ್ರಯದಲ್ಲಿ 35ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ,ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿ ಸಂಸ್ಮರಣೆ, "ಚೈತನ್ಯ" ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಬಂಟ್ವಾಳ :ಶ್ರೀ ಶಾರದಾ ಪೂಜೆ ಸೇವಾ ವೇದಿಕೆ ಕೊಡ್ಮಾಣ್ ಇದರ ಆಶ್ರಯದಲ್ಲಿ 35ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅಕ್ಟೋಬರ್ 20 ಶುಕ್ರವಾರದಿಂದ 23ನೇ ಸೋಮವಾರ ತನಕ ದ ಕ ಜಿ ಪಂ ಹಿ ಪ್ರಾ ಶಾಲೆ, ಕೊಡ್ಮಾಣ್ ಇಲ್ಲಿನ ಶಾರದ ಮಂಟಪದಲ್ಲಿ ಸಕಲ ವಿಜ್ರಮಣೆಯಿಂದ ನೆರವೇರಲಿದೆ.

ಅ.19 ರಂದು ಗುರುವಾರ ಸಂಜೆ ಪರಂಗಿಪೇಟೆ ಶ್ರೀ ವರದೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆಗೊಂಡು ನಂತರ ಶ್ರೀ ಶಾರದ ವಿಗ್ರಹವನ್ನು ಉತ್ಸವ ಮಂಟಪಕ್ಕೆ ತರಲಾಗುವುದು.

 ಅ.20 ರಂದು ಬೆಳಿಗ್ಗೆ 6.20ಕ್ಕೆ ಶ್ರೀ ಶಾರದೆಯ ಪ್ರತಿಷ್ಠೆ, ಉತ್ಸವದ ಉದ್ಘಾಟನೆ, ಧ್ವಜಾರೋಹಣ, ಉದ್ಘಾಟನಾ ಸಮಾರಂಭ, ಗಣಪತಿ ಹೋಮ ರಂಗಪೂಜೆ ನಡೆಯಲಿದೆ. ಸಂಜೆ 7.30ಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಂಕಂ ತಂಡ ಬೆಂಗಳೂರು ಇವರಿಂದ ನೃತ್ಯಾರ್ಪಣಂ ನೃತ್ಯ ವೈಭವ ನಡೆಯಲಿದೆ.

 ಅ.21 ರಂದು ಬೆಳಿಗ್ಗೆ ಚಂಡಿಕಾಯಾಗ, ಸ್ವಯಂವರ ಪಾರ್ವತಿ ಪೂಜೆ, ಸಂಜೆ 7.30ಗೆ ಸಭಾ ಕಾರ್ಯಕ್ರಮ, ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ, "ಚೈತನ್ಯ" ಪುಸ್ತಕ ಬಿಡುಗಡೆ ನಡಯಲಿದೆ.8.30ಯಿಂದ ಕೊಡ್ಮಾಣ್ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ಜರುಗಲಿದೆ.

 ಅ.22ರಂದು ಆದಿತ್ಯವಾರಬೆಳಿಗ್ಗೆ ಸೂಕ್ತ ಹೋಮ,, ದುರ್ಗಾ ನಮಸ್ಕಾರ ಪೂಜೆ, ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಶ್ರೀ

ಉಳ್ಳಾಲ ಚೀರಂಭ ಭಗವತಿ ಕೃಪಾಶ್ರಿತ ಮೇಳದಿಂದ "ಶಕ್ತಿದ ಕೊರತಿ" ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

23ರಂದು ಸೋಮವಾರ ಬೆಳಿಗ್ಗೆ ಅಕ್ಷರಾರಂಭ, ದುರ್ಗಾ ಹೋಮ, ಆಯುಧ ಪೂಜೆ, ಮಧ್ಯಾಹ್ನ 12.30ಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಯಕ್ಷ ಕಲಾವಿದರಿಂದ ಯಕ್ಷಗಾನ ವೈಭವ ಸ್ವರಾಭಿಷೇಕ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.

ಅ 23ರಂದು ಸಂಜೆ 3ಕ್ಕೆ ಶ್ರೀ ಶಾರದಾ ಮಾತೆಗೆ ಮಹಾ ಮಂಗಳಾರತಿಯ ನಂತರ ದಿಗ್ವಿಜಯದ ವಿಸರ್ಜನೆೋತ್ಸವ ಶೋಭಯಾತ್ರೆ ಕೊಡ್ಮಾಣ್, ನೆತ್ತರಕೆರೆ, ಹೋಯಿಗೆಗದ್ದೆ,ಗೋವಿನ ತೋಟ, ಕಾಪಿಕಾಡ್, ಕಬೇಲ ಸಂಚರಿಸಿ ನಂತರ ಏಪೆದಗುರಿ ಅಪ್ಪಯ್ಯ ಮೂಲ್ಯರ ಮನೆತನದ ದೇವರಕೆರೆಯಲ್ಲಿ ಶ್ರೀ ಶಾರದಾ ವಿಗ್ರಹದ ಜಲ ಸ್ತಂಭನವಾಗುವುದು ಈ ಪುಣ್ಯ ಕಾರ್ಯದಲ್ಲಿ ಭಗದ್ಬಕ್ತರು ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ.

Leave a Comment