ಕೊಡ್ಮಾಣ್ :33ನೇ ವರ್ಷದ ಶಾರದೋತ್ಸವಕ್ಕೆ ಸಂಭ್ರಮದ ತೆರೆ.

Coastal Bulletin
ಕೊಡ್ಮಾಣ್ :33ನೇ ವರ್ಷದ ಶಾರದೋತ್ಸವಕ್ಕೆ ಸಂಭ್ರಮದ ತೆರೆ.

ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯ ಆಶ್ರಯದಲ್ಲಿ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್ ಇಲ್ಲಿನ ಶ್ರೀ ಶಾರದಾ ಮಂಟಪದಲ್ಲಿ ನಾಲ್ಕು ದಿನಗಳ ಕಾಲ ನಡೆದ 33ನೇ ವರ್ಷದ ಶಾರದಾ ಪೂಜಾ ಮಹೋತ್ಸವವು ಗುರುವಾರ ಶ್ರೀ ಶಾರದಾ ವಿಗ್ರಹದ ಜಲಸ್ತಂಭನದೊಂದಿಗೆ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮಮದ ರೂವಾರಿ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡುತ್ತ, ಶ್ರದ್ದಾ ಭಕ್ತಿಯಿಂದ ಶಾಸ್ರೋಕ್ತವಾಗಿ ಕಳೆದ 32 ವರುಷಗಳಿಂದ ಶಾರದಾ ಪೂಜಾ ಮಹೋತ್ಸವವು ನಡೆದುಕೊಂಡು ಬರುತಿದೆ,ಈ ನಾಲ್ಕು ದಿನಗಳಲ್ಲಿ ರಂಗ ಪೂಜೆ,ಶ್ರೀ ಸೂಕ್ತ ಹೋಮ,ದುರ್ಗಾ ನಮಸ್ಕಾರ ಪೂಜೆ, ಅಕ್ಷರಾರಂಭ ಪೂಜೆ,ಹಾಗೂ ಚಂಡಿಕಾಯಾಗ ಮುಂತಾದ ವಿಶೇಷ ಪೂಜೆ ಗಳು ನಡೆಯುತದೆ ಅದೇ ರೀತಿ ಕಲೆ,ಸಾಹಿತ್ಯ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹಿರಿ ಕಿರಿಯರನ್ನು ಗುರುತಿಸಿ ಈ ವೇದಿಕೆಯಲ್ಲಿ ಪ್ರತಿ ವರ್ಷ ಗೌರವಿಸುತಿದ್ದೇವೆ,


ನಿರಂತರ ನಾಲ್ಕು ದಿನಗಳಲ್ಲಿಯೂ ಅನ್ನಸಂತರ್ಪಣೆ ನಡೆಯುತದೆ ಎಂದರು,ಈ ವರ್ಷವು ಕೂಡ ಸೋಮವಾರ ದಿಂದ ಮೊದಲ್ಗೊಂಡು ಗುರುವಾರ ತನಕ ನಡೆದ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳ ತನು ಮನ ಧನಗಳ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

Leave a Comment