ಬಂಟ್ವಾಳ: ದೇಶದಲ್ಲಿ 1857ರ ಸಿಪಾಯಿ ದಂಗೆಗೂ ಮೊದಲು ಅವಿಭಜಿತ ಜಿಲ್ಲೆಯ ಸುಳ್ಯ, ಉಪ್ಪಿನಂಗಡಿ, ಬಂಟ್ವಾಳ, ಉಳ್ಳಾಲ ಮಾತ್ರವಲ್ಲದೆ ಉಡುಪಿ ಮತ್ತಿತರ ಕಡೆಗಳಲ್ಲಿ ಪೋರ್ಚ್ ಗೀಸರು ಮತ್ತು ಬ್ರಿಟೀಷರ ವಿರುದ್ಧ ಇಲ್ಲಿನ ರೈತರು ಮತ್ತು ರಾಣಿ ಅಬ್ಬಕ್ಕನಂತಹ ಕೆಚ್ಚೆದೆಯ ಹೋರಾಟಗಾರರು ಸಿಡಿದೆದ್ದು ಸಮರ್ಥವಾಗಿ ಎದುರಿಸಿದ್ದಾರೆ. ಇಂತಹ ಸ್ವಾಭಿಮಾನಿ ಮತ್ತು ಸೌಹಾರ್ದಯುತ ಹೋರಾಟಗಳ ಬಗ್ಗೆ ಇತಿಹಾಸ ರಚನೆ ಮತ್ತು ದಾಖಲೀಕರಣಗೊಳಿಸುವಲ್ಲಿ ಎಡವಿದ್ದೇವೆ ಎಂದು ಪತ್ರಕರ್ತ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಕಳವಳ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ 'ಅಮೃತ ಭಾರತಿಗೆ ಗಾನ-ನುಡಿಯ ದೀವಿಗೆ' ಕಾರ್ಯಕ್ರಮದಲ್ಲಿ 'ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕಲಿಗಳು' ಎಂಬ ವಿಷಯದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇದೇ ವೇಳೆ ಜಗಧೀಶ್ ಆಚಾರ್ಯ ಪುತ್ತೂರು ತಂಡದಿಂದ ನಡೆದ 'ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ'ದಲ್ಲಿ 'ತಾಯಿ ಭಾರತೀಯ ಪಾದ ಕಮಲಗಳನ್ನು ಪೂಜಿಸೋಣ ಬನ್ನಿ', 'ದೇಶ ದೇಶ ನಮ್ಮದು' ಹಾಡು ಗಮನ ಸೆಳೆಯಿತು.
ವಾಹನ ಜಾಥ:
ಆರಂಭದಲ್ಲಿ ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಹೊರಟ ಆಕರ್ಷಕ ವಾಹನ ಜಾಥಾಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಪ್ರಮುಖರಾದ
ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ಜಗದೀಶ ಶೇಣವ, ಕೆ.ಪಿ.ಜಗದೀಶ ಅಧಿಕಾರಿ, ಮಾಧವ ಮಾವೆ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ರಾಮದಾಸ್ ಬಂಟ್ವಾಳ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮಾನಾಥ ರಾಯಿ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ ಮತ್ತಿತರರು ಪಾಲ್ಗೊಂಡರು.
ತಹಶಿಲ್ದಾರ್ ಡಾ.ಸ್ಮಿತಾ ರಾಮು, ಇ.ಒ.ರಾಜಣ್ಣ, ಎಸ್ಪಿ ಹೃಷಿಕೇಶ್ ಸೋನವಾಣೆ, ಡಿವೈಎಸ್ಪಿ ಪ್ರತಾಪ್ ಪಿ.ಥೋರಾಟ್, ಇನ್ಸ್ ಪೆಕ್ಟರ್ ವಿವೇಕಾನಂದ, ಟಿ.ಡಿ.ನಾಗರಾಜ್, ಎಸೈ ಅವಿನಾಶ್, ಹರೀಶ್, ಮೂರ್ತಿ , ಪುರಸಭಾ ಮುಖ್ಯಾಧಿಕಾರಿ ಸ್ವಾಮಿ, ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ ಮತ್ತಿತರ ಇಲಾಖೆ ಅಧಿಕಾರಿಗಳು ಇದ್ದರು. ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸುದರು.
















