ಬಂಟ್ವಾಳ :ಜಿಲ್ಲೆಯ ಹಿರಿಯ ಅಧಿಕಾರಿಗಳಿಂದಾಗಿ ಮರಳು ಮತ್ತು ಕೆಂಪುಕಲ್ಲು ಕೃತಕ ಅಲಭ್ಯತೆಯನ್ನು ಸೃಷ್ಟಿಯಾಗಿದೆ.ಬೆಂಗಳೂರು ಹೊರತು ಪಡಿಸಿದರೆ ದ.ಕ.ಜಿಲ್ಲೆ ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದು,ಸರಕಾರ ಮಾತ್ರ ಅಭಿವೃದ್ಧಿ ಸಹಿತ ಎಲ್ಲಾ ವಿಚಾರದಲ್ಲಿಯು ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಟೀಕಿಸಿದರು.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ಮರಳು,ಕೆಂಪು ಕಲ್ಲು ಕೊರತೆಯ ವಿರುದ್ಧ ಜನಾಕ್ರೋಶದ ಪ್ರತಿಭಟನೆ ಜು 14 ಸೋಮವಾರ ಬಿ.ಸಿ.ರೋಡಿನ ಮೇಲ್ಸ್ ತುವೆಯ ತಳಭಾಗದಲ್ಲಿ ಶಾಸಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕೆಂಪು ಕಲ್ಲು ಮತ್ತು ಮರಳು ಜಿಲ್ಲೆಯ ಜನತೆಯ ಅವಿಭಾಜ್ಯ ಅಂಗವಾಗಿದ್ದು,ಇವೆರಡರ ಕೃತಕ ಅಭಾವದಿಂದಾಗಿ 25 ಸಾವಿರಕ್ಕು ಅಧಿಕ ಕಾರ್ಮಿಕರು ಬೀದಿಪಾಲಾಗುವ ಸಾಧ್ಯತೆ ಇದೆ.ಕಾನೂನು ಸುವ್ಯವಸ್ಥೆಯ ನೆಪದಲ್ಲಿ ಅಧಿಕಾರಿಗಳು ಮಾಡಿರುವ ಕ್ರಮದಿಂದ ಕಾರ್ಮಿಕರೇ ಮುಂದಿನ ದಿನಗಳಲ್ಲಿ ಬೀದಿಗೆ ಬಂದು ಕಾನೂನು ಸುವ್ಯವಸ್ಥೆಗೆ ಮತ್ತೆ ಅಡಚಣೆಯಾಗಲು ಪ್ರೆರೇಪಿಸಿದಂತಾಗಿದೆ ಎಂದರು.
ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಿರಿಯ ಅಧಿಕಾರಿಯ ಹುದ್ದೆಯೇ ಖಾಲಿ ಇದ್ದು,ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಕಾರ್ಮಿಕರ ಬವಣೆಯು ಆರ್ಥವಾಗುತ್ತಿಲ್ಲ,ಸರಕಾರ ಕಳೆದೆರಡು ತಿಂಗಳಿನಿಂದ ಉಂಟಾಗಿರುವ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿಯು ಮುಂದಾಗುತ್ತಿಲ್ಲ,ಈ ವಿಚಾರದಲ್ಲಿ ಜಿಲ್ಲೆಯ ಶಾಸಕರನ್ನು ಕರೆದು ಸಲಹೆಯನ್ನು ಪಡೆಯುವಂತ ಔದಾರ್ಯವನ್ನು ಜಿಲ್ಲಾ ಉಸ್ತವಾರಿ ಸಚಿವರಾಗಲಿ,ಸಂಬಂಧ ಪಟ್ಟ ಇಲಾಖಾ ಸಚಿವರಾಗಲಿ ಮಾಡುತ್ತಿಲ್ಲ,ಒಟ್ಟಾರೆ ಸಚಿವರು,ಅಧಿಕಾರಿಗಳು ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳ ಪರಿಸರದಲ್ಲಿ ಸಾಕಷ್ಟು ಮರಳು,ಕೆಂಪುಕಲ್ಲಿನ ಲಭ್ಯತೆ ಇದ್ದರೂ ಅದನ್ನು ಪ್ರಸಕ್ತ ದಿನಗಳಲ್ಲಿ ಜನಸಾಮಾನ್ಯರು,ಕಾರ್ಮಿಕರಿಗೆ ಸದುಪಯೋಗಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಜಿಲ್ಲೆಗೆ ಸೂಕ್ತ ಮರಳು ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೂ ಚರ್ಚಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು
ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರು ಮಾತನಾಡಿ,ಜಿಲ್ಲೆಯಲ್ಲಿ ಕೆಂಪುಕಲ್ಲು ,ಮರಳು ಅಭಾವ ಕರಾಳ ಪರಿಸ್ಥಿತಿಯನ್ನು ತಂದೊಡ್ಡಿದೆ.ಇದರ ಜೊತೆಗೆ ಜಿಲ್ಲೆಯ ಜನರು 9-11 ಸಹಿತ ವಿವಿಧ ಸಮಸ್ಯೆಯಿಂದ
ತೊಂದರೆ ಅನುಭವಿಸುತ್ತಿದ್ದು, ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾದಿಯಾಗಿ ಸಚಿವರು,ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಕೇರಳದಲ್ಲಿ ಕೆಂಪುಕಲ್ಲು ಒಂದು ಟನ್ ಗೆ 32 ರಾಜಧನ ಸ್ವೀಕರಿಸುತ್ತಿದ್ದರೆ,ದ.ಕ.ದಲ್ಲಿ 292 ರೂ.ರಾಜಧನ,ತೆರಿಗೆಯನ್ನು ಹೆಚ್ಚಿಸುವ ಮೂಲಕ ಕೋರೆಮಾಲಕರು,ಗುತ್ತಿಗೆದಾರರು,ಲಾರಿಚಾಲಕ ರಿಂದ ಸರಕಾರವೇ ಹಪ್ತಾ ವಸೂಲಿಗಿಳಿದಿದೆ ಎಂದು ಟೀಕಾ ಪ್ರಹಾರಗೈದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಬೇಕಾದಷ್ಟು ಕೆಂಪುಕಲ್ಲು, ಮರಳು ಸಿಗುತ್ತದೆಯಾದರೂ ಜನಸಾಮಾನ್ಯರು,ಕಟ್ಟಡ ಕಾರ್ಮಿಕರಿಗೆ ಸಿಗುತ್ತಿಲ್ಲ,ಹಾಗಾಗಿ ದ.ಕ.ಜಿಲ್ಲೆಯಲ್ಲಿ ಮನೆನಿರ್ಮಾಣ ಸಹಿತ ವಿವಿಧ ಸರಕಾರಿ ಕಟ್ಟಡಗಳ ಕಾಮುಗಾರಿ ನಡೆಯುತ್ತಿಲ್ಲ ಪರಿಣಾಮ ಕೂಲಿಕಾರ್ಮಿಕರು ಅವರ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಿಜೆಪಿ ರಾಜ್ಯ ನಾಯಕಿ ಸುಲೋಚನಾ ಜಿ.ಕೆ.ಭಟ್,ಬಿಜೆಪಿ ಮುಖಂಡ ಮಾಧವ ಮಾವೆ ಸಭೆಯನ್ನುದ್ದೇಶಿಸಿ ಮಾತನಾಡಿ,ಸರಕಾರದ ಈ ಜನವಿರೊಇಧಿ ನೀತಿಯಿಂದ ಸಾವಿರಾರು ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.ಮನೆ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದು,ಲಾರಿ ಮಾಲಕರು, ಚಾಲಕರು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಜನಸಾಮಾನ್ಯರ ಬದುಕೇ ಕುಸಿಯುವ ಹಂತದಲ್ಲಿದೆ ಎಂದು ಕಳವಳವ್ಯಕ್ತಪಡಿಸಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಪಕ್ಷದ ಮುಖಂಡರಾದ ದಿನೇಶ ಅಮ್ಟೂರು, ಪ್ರಭಾಕರ ಪ್ರಭು,ರಾಮದಾಸ ಬಂಟ್ವಾಳ,ಗೋವಿಂದ ಪ್ರಭು ವೆಂಕಟೇಶ್ ನಾವಡ, ದಿನೇಶ್ ಭಂಡಾರಿ,ವಸಂತ ಅಣ್ಣಳಿಕೆ,ಮೋನಪ್ಪ ದೇವಸ್ಯ,ಸಂತೋಷ್ ರಾಯಿಬೆಟ್ಟು,ಹರ್ಷಿಣಿ ಪುಪ್ಪಾನಂದ,ರೋನಾಲ್ಡ್ ಡಿಸೋಜ, ಪುರುಷೋತ್ತಮ ಸಾಲಿಯಾನ್ ನರಿಕೊಂಬು,ಪುರುಷೋತ್ತಮ ಶೆಟ್ಟಿ ವಾಮದಪದವು,ಹರಿಪ್ರಸಾದ್ ಭಂಡಾರಿಬೆಟ್ಟು ರವೀಂದ್ರ ಕಂಬಳಿ,ಶಿವಪ್ರಸಾದ್ ಶೆಟ್ಟಿ,ಕಮಾಲಾಕ್ಷಿ ಪೂಜಾರಿ,ಜನಾರ್ದನ ಕುಲಾಲ್ ಬೊಂಡಲ, ಜಯರಾಮ ರೈ,ಯಶೋಧರ ಕರ್ಬೆಟ್ಟು, ಸುರೇಶ್ ಕುಲಾಲ್ ಬಂಟ್ವಾಳ ,ಪುರುಷೋತ್ತಮ ಶೆಟ್ಟಿ ವಾಮದಪದವು, ರಾಧಾಕೃಷ್ಣ ತಂತ್ರಿ, ಪುರುಷೋತ್ತಮ್ ಕೊಟ್ಟಾರಿ,ವಿಜಯ ರೈ, ಹಾಗೂ ಕಟ್ಟಡ ಸಹಿತ ಇತರೆ ನಿರ್ಮಾಣ ಕಾಮಗಾರಿ ಕಾರ್ಮಿಕರು ಉಪಸ್ಥಿತರಿದ್ದರು.
ಬಳಿಕ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಪ್ರಸ್ತಾವಿಸಿ ,ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.













