Coastal Bulletin

ಮಂಗಳೂರು: ದೇವಸ್ಥಾನಕ್ಕೆ ಸೇರಿದ ಮೈದಾನದಲ್ಲಿ ಗೆಳೆಯರೊಂದಿಗೆ ಆಟ ಆಡುತಿದ್ದ ಅನ್ಯಕೋವಿನ ಯುವಕನನ್ನು ಆಡದಂತೆ ಬೆದರಿಸಿ ಮೈದಾನದಿಂದ ಹೊರದಬ್ಬಿದ ಘಟನೆ ಸುಳ್ಯ ಜಯನಗರ ಎಂಬಲ್ಲಿ ನಡೆದಿದೆ.

ಜಯನಗರದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಕೊರಗಜ್ಜ ದೇವಸ್ಥಾನ ಕೊರಂಬಡ್ಕ  ಇದರ ಮೈದಾನದಲ್ಲಿ ಹಿಂದೂ ಯುವಕರೊಂದಿಗೆ ಆಟವಾಡುತಿದ್ದ ಕ್ರೈಸ್ತ ಯುವಕನ ಬಳಿಬಂದ ಪ್ರವೀಣ್ ಎಂಬಾತ ಯುವಕನನ್ನು ತರಾಟೆಗೆ ತೆಗೆದು ನೀನು ಹಿಂದು ಅಲ್ಲ ಹೊರಗೆ ಹೋಗು ಇಲ್ಲಿ ಆಡಬಾರದು ಎಂದಿದ್ದಾನೆ.

ಇದನ್ನು ವಿರೋಧಿಸಿದ ಆತನ ಗೆಳೆಯನಿಗೆ “ನೋಡು ಲೋಕೇಶ್, ನನಗೆ ನಿನ್ನ ಮೇಲೆಯಾಗಲೀ ಅಥವಾ ಅ ಹುಡಗನ ಮೇಲೆಯಾಗಲೀ, ಯಾರ ಮೇಲೂ ಕೋಪವಿಲ್ಲ, ಜಗಳ ಮಾಡುವುದಾದರೆ ಮಾಡುವ ನನಗೇನು ಅಭ್ಯಂತರವಿಲ್ಲ, ನಾನು ಶಾಸಕರಿಗೆ ಕರೆ ಮಾಡಿ ಮೊದಲೇ ಹೇಳಿದ್ದೇನೆ, ನನಗೆ ಯಾರ ಭಯವಿಲ್ಲ. ಇವರು ಎಸ್ಸಿ, ಎಸ್ಟಿ ಆದರೆ ಇವರ ಜೊತೆ ಆಡುವುದರಲ್ಲಿ ನನಗೆ ಸಮಸ್ಯೆ ಇಲ್ಲ. ಆದರೆ ಹಿಂದೂ ಅಲ್ಲದ

ಬೇರೆ ಧರ್ಮದವರ ಜೊತೆ ಇಲ್ಲಿ ಆಡುತ್ತಿದ್ದೀರಲ್ಲ, ಯಾಕೆ ಅವರ ಜೊತೆ ಆಡುತಿದ್ದೀರಿ ? ಎಂದು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

 ಕ್ರೈಸ್ತ ಯುವಕನ ಬೆಂಬಲಕ್ಕೆ ನಿಂತು ಆಟದಲ್ಲಿ ಧರ್ಮಯಾಕೆ ಎಂದು ಪ್ರಶ್ನಿಸಿದ ಯುವಕನಿಗೆ “ನಾವು ಮುಸ್ಲಿಮರ ಬಳಿ ಹೋಗಲ್ಲ, ಕ್ರೈಸ್ತರ ಬಳಿ ಸಹ ಹೋಗಲ್ಲ, ಚರ್ಚ್ ಎದುರು ಮೈದಾನವಿದೆ ಅಲ್ಲಿ ಹೋಗಿ ಆಡಲು ಸಾಧ್ಯವೇ? ನೀನು ಹಿಂದು ಅಲ್ಲ ಹೊರಗೆ ಹೋಗು , ಕೊರಗಜ್ಜ ಹಿಂದುಗಳದ್ದು, ನಿಮ್ಮದಲ್ಲ ಎಂದು ದಬಾಯಿಸಿದ್ದಾನೆ.

ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಟಕ್ಕೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ. ಆದರೆ ಹುಡುಗರು ಆಟವಾಡುತ್ತಿದ್ದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬತರಾಟೆಗೆತ್ತಿಕೊಂಡು ಕೋಮು ವೈಷಮ್ಯ ಹುಟ್ಟಿಸುವ ರೀತಿ ಮಾತನಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Leave a Comment