ಬಂಟ್ವಾಳ:ಇಲ್ಲಿನ ತುಂಬೆ ಸಮೀಪದ ಕೊಟ್ಟಿಂಜ ನಿವಾಸಿ, ಯುವ ಉತ್ಸಾಹಿ ಎಂಜಿನಿಯರ್ ಸಂತೋಷ್ ಕುಮಾರ್ ಕೊಟ್ಟಿಂಜ (42) ಇವರು ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಮೃತರಿಗೆ ತಾಯಿ,ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಗೆಜ್ಜೆಗಿರಿ ದೇಯಿ ಬೈದೆತಿ ಮತ್ತು ಕೋಟಿ ಚೆನ್ನಯ ಮೂಲಸ್ಥಾನ, ಬಂಟ್ವಾಳ ಸಜಿಪ ಶ್ರೀ ನಾರಾಯಣಗುರು ಜ್ಞಾನ ಮಂದಿರ, ಸುಂಕದಕಟ್ಟೆ ನಿರಂಜನ ಸ್ವಾಮಿಜಿ ಸಮಾಧಿ ನಿರ್ಮಾಣ ಮತ್ತಿತರ ಕಲಾತ್ಮಕ ನಕಾಶೆ ಸಿದ್ಧಪಡಿಸಿದ್ದರು. ಕುದ್ರೋಳಿ ಶ್ರೀ
ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಬಂಟ್ವಾಳ ಲಯನ್ಸ್ ಕ್ಲಬ್ ಸದಸ್ಯರಾಗಿದ್ದರು. ಎಸ್. ಕೆ. ಬಿಲ್ಡರ್ಸ್ ಸಂಸ್ಥೆ ಮಾಲೀಕರಾಗಿದ್ದರು.
ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಗಂಟೆ 10.30ಕ್ಕೆ ಸ್ವಗೃಹ ಬಳಿ ನೆರವೇರಲಿದೆ.














