ಬಂಟ್ವಾಳ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ದುರ್ಗಾಪರಮೇಶ್ವರಿ ದೇವಸ್ಥಾನ ಮೊಂತಿಮಾರ್ ನಲ್ಲಿ :ಫೆ.11ರಂದು ನಡೆಯಿತು.
ಶಿಬಿರದ ಉದ್ಘಾಟನೆಯನ್ನು ವಿಕಾಸ ಪುತ್ತೂರು ಇವರು ನಡೆಸಿಕೊಟ್ಟರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಕ್ತೇಸರರು ಸತೀಶ್ಚಂದ್ರ ಎಸ್ ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಜಾಗೃತಿ, ಹೊಂದಾಣಿಕೆಯ ಬದುಕು, ಶಿಬಿರದ ಉದ್ದೇಶ, ವಿಚಾರಗಳನ್ನ ತಿಳಿದು ಅಳವಡಿಸಿ ಕೊಳ್ಳುವ ಪ್ರಯತ್ನ ಶಿಬಿರದಲ್ಲಿ ಆಗಬೇಕು. ಆಗ ಮಾತ್ರ ಈ ತ್ಯಾಗಕ್ಕೆ ಒಂದು ಬೆಲೆ ಅಂದರು.
ಶ್ರಮದಾನದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಕೇಶವ ರಾವ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕ ರಮೇಶ್, ಕೋಶಾಧಿಕಾರಿ ಸತೀಶ್ ಶಿವಗಿರಿ, ಸಾಮಾಜಿಕ ಕಾರ್ಯಕರ್ತ ಪತ್ತುಮುಡಿ ರಮೇಶ್ ರಾವ್ ಮಂಚಿ, ಅಂಬಿಕಾ ಮಿತ್ರ ಮಂಡಳಿ ಅಧ್ಯಕ್ಷ ದಿನೇಶ್ ಸಾಲಿಯಾನ್, ಮಂಚಿ ಯುವಕ ವೃಂದದ ಅಧ್ಯಕ್ಷರಾದ ಚಂದ್ರಶೇಖರ್ ನಾಯಕ್, ಮೊಂತಿಮಾರ್ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ದೇವಕಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೃಷ್ಣಪ್ರಸಾದ್ ಕೆ. ಪ್ರಾಸ್ತಾವಿಕ ಮಾತಗಳನ್ನಾಡಿದರು.ಯೋಜನಾಧಿಕಾರಿ ಯತಿರಾಜ್ ಪಿ ಸ್ವಾಗತಿಸಿ, ವಿದ್ಯಾರ್ಥಿನಿ ಆಶ್ರಿತ ವಂದಿಸಿದರು. ಮನ್ವಿತ ಕಾರ್ಯಕ್ರಮ ನಿರೂಪಿಸಿದರು.










