ಬಂಟ್ವಾಳ ಕುಲಾಲ ಸುಧಾರಕ ಸಂಘದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ಗೆ ಸನ್ಮಾನ

Coastal Bulletin
ಬಂಟ್ವಾಳ ಕುಲಾಲ ಸುಧಾರಕ ಸಂಘದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ಗೆ ಸನ್ಮಾನ

ಬಂಟ್ವಾಳ : ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಮಂಗಳವಾರ ಮಂಗಳೂರಿನ ದಾಸ್ ಪ್ರೊಮೋಶನ್ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ ಬಂಟ್ವಾಳ ಕುಲಾಲ ಸುಧಾರಕ ಸಂಘ ನಮ್ಮ ಅಚ್ಚುಮೆಚ್ಚಿನ ಸಂಘವಾಗಿರುತ್ತದೆ. ಕುಲಾಲ ಸಮಾಜದಲ್ಲಿ ತುಂಬಾ ಸಾಧಕರಿರುತ್ತಾರೆ. ಸಾಧಕರಿಗೆ ಕುಲಾಲ ಸಮಾಜದ ಸಂಘಗಳ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಅಷ್ಟೇ ಅಲ್ಲದೇ ಜನವರಿ ೪ರಂದು ಕುಲಾಲ ಕುಂಬಾರರ ಯುವವೇದಿಕೆಯ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭ ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು, ಎಲ್ಲಾ ಕುಲಾಲ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇದೇ ಸಂದರ್ಭ ಕುಂಭಕಲಾವಳಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದಾಸ್ ಚಾರಿಟೇಬಲ್ ಸೇವಾ

ಟ್ರಸ್ಟ್ ಇದರ ವತಿಯಿಂದ ಸೇವಾ ಕಾರ್ಯಕ್ರಮಗಳು ನಡೆಯಲಿರುವುದರಿಂದ ಎಲ್ಲಾ ಕುಲಾಲ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ನಿಕಟ ಪೂರ್ವಾಧ್ಯಕ್ಷರಾದ ಮಚೇಂದ್ರನಾಥ ಸಾಲಿಯಾನ್ , ರಾಧಾಕೃಷ್ಣ ಬಂಟ್ವಾಳ, ಜತೆಕಾರ್ಯದರ್ಶಿಗಳಾದ ಸತೀಶ್ ಸಂಪಾಜೆ, ಮೀನಾಕ್ಷಿ ಪದ್ಮನಾಭ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಾಧವ ಬಿ ಸಿ ರೋಡ್ , ಜಯಂತ್ ಬಂಗೇರ ವಗ್ಗ , ಪ್ರೇಮ ಜನಾರ್ಧನ ಪೊಸಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ್ ಉಪಸ್ಥಿತರಿದ್ಸರು.

Leave a Comment