ದಾಸಕೋಡಿ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಸ್ಥಳದಲ್ಲೇ ಮೃತ್ಯು.

Coastal Bulletin
ದಾಸಕೋಡಿ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಸ್ಥಳದಲ್ಲೇ ಮೃತ್ಯು.

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಮೃತಪಟ್ಟ ಘಟನೆ ಆ 12ರಂದು ರಾತ್ರಿ ಸುಮಾರು 6.30 ಕ್ಕೆ ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.

ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ ( 23) ಮೃತಪಟ್ಟ ಯುವತಿ.ಬಿಸಿರೋಡಿನ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಂಜೆ ಕೆಲಸ ಬಿಟ್ಟು ಬಿಸಿರೋಡಿನಿಂದ ಬಸ್ ಮೂಲಕ ಊರಿಗೆ ಹೋಗಿದ್ದಳು. ಯುವತಿ ದಾಸಕೋಡಿ ಎಂಬಲ್ಲಿ ಬಸ್ಸ್ ನಿಂದ ಇಳಿದು ಹೆದ್ದಾರಿ ಬದಿಯಲ್ಲಿ

ನಡೆದುಕೊಂಡು ಹೋಗುವ ವೇಳೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಯುವತಿ ರಸ್ತೆ ಬದಿಯ ತೋಡಿಗೆ ಎಸೆಯಲ್ಪಟ್ಟಿದ್ದಾಳೆ. ಕಾರು ಕೂಡ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಂಕ್ರೀಟ್ ರಸ್ತೆಯಲ್ಲಿ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

Leave a Comment