ಬಂಟ್ವಾಳ:ಇಲ್ಲಿನ 8 ಗ್ರಾಮಗಳಿಗೆ ಸಂಬಂಧಿಸಿದಂತೆ ಕಳೆದ 1947ರಲ್ಲಿ ಆರಂಭಗೊಂಡ ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.20ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಕಳೆದ ಸಾಲಿನಲ್ಲಿ ಸಂಘವು ಒಟ್ಟು ರೂ 545 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ 1.93 ಕೋಟಿ ಮೊತ್ತದ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಅವರು ಸಿದ್ಧಕಟ್ಟೆಯಲ್ಲಿ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ' ಪ್ರಸಕ್ತ ಪೂಂಜ ಸಮೀಪದ ಆರಂಬೋಡಿ, ಮಾವಿನಕಟ್ಟೆ, ರಾಯಿ ಮತ್ತು ಅರಳ ಎಂಬಲ್ಲಿ ಶಾಖೆ ಹೊಂದಿರುವ ಸಂಘವು ಕಳೆದ 78 ವರ್ಷಗಳಿಂದ ರೈತರಿಗೆ ಸಂತೃಪ್ತ ಸೇವೆ ನೀಡುತ್ತಿದೆ ಹಾಗೂ ಸಂಘವು ಕಳೆದ ಹಲವಾರು ವರ್ಷಗಳಿಂದ ಆಡಿಟ್ ವರದಿಯಲ್ಲಿ ಎ ಗ್ರೇಡ್ ನ್ನು ನಿರಂತರವಾಗಿ ಕಾಯ್ದುಕೊಂಡು ಬರಲಾಗಿ ಎಂದರು.ಎಂದರು.
ಸಂಘವು ಶೇ.97ರಷ್ಟು ಸಾಲ ವಸೂಲಾತಿ ದಾಖಲಿಸಿದ್ದು, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲೇ ಗರಿಷ್ಟ ಸಾಧನೆ ಮಾಡಿದೆ. ಗ್ರಾಮೀಣ ಮಹಿಳೆಯರಿಗೆ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನ್ ತರಬೇತಿ,
ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ, ರೈತ ಕಲ್ಯಾಣ ನಿಧಿ, ನ್ಯಾಯ ಬೆಲೆ ಅಂಗಡಿ, ಕಡಿಮೆ ಬಡ್ಡಿ ದರದಲ್ಲಿ ಸಾವಯವ ಮತ್ತು ರಸಗೊಬ್ಬರ ಸಹಿತ ಸುಣ್ಣ, ಮೈಲುತುತ್ತು ವಿತರಣೆ, ಎಲ್ಲಾ ಶಾಖೆಗಳಲ್ಲಿ ಕಂಪ್ಯೂಟರೀಕರಣಗೊಳಿಸಿ ಸದಸ್ಯರಿಗೆ ಆರ್ ಟಿ ಜಿ ಎಸ್, ನೆಫ್ಟ್ ಮತ್ತಿತರ ತ್ವರಿತ ಸೇವೆ ಸೌಲಭ್ಯ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ, ಸಿಇಒ ಆರತಿ ಶೆಟ್ಟಿ ಅರಳ, ನಿದರ್ೇಶಕರಾದ ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ , ಜಾರಪ್ಪ ನಾಯ್ಕ, ಎ.ಶಿವ ಗೌಡ, ಪುಷ್ಪಲತಾ ಎಸ್.ಆರ್, ರಾಜೇಶ್ ಶೆಟ್ಟಿ ಕೊನೆರೊಟ್ಟು, ನವೀನ್ ಹೆಗ್ಡೆ, ಸಹಾಯಕ ಸಿಇಒ ಮಲ್ಲಿಕಾ ಮತ್ತಿತರರು ಇದ್ದರು.
















