Coastal Bulletin

ಮಂಗಳೂರು : ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.) ಪೆರ್ಡೂರು ಇದರ ಸಹಸಂಸ್ಥೆಯಾದ ಪಾರಂಪರಿಕ ಹಾಗೂ ಅತ್ಯಾಧುನಿಕ ಶೈಲಿಯ ಮಣ್ಣಿನ ವಿಭಿನ್ನ ವಸ್ತುಗಳ ಮಾರಾಟ ಮಳಿಗೆ "ಕ್ಲೇ ಕಾಟ್ಸ್೯"ನ 7ನೇ ಬೃಹತ್ ಶೋರೂಂ ಸೆ.10 ರಂದು ಮೈಸೂರು ಕೆ.ಆರ್.ಎಸ್. ರೋಡ್ ಪಂಪ್ ಹೌಸ್ ಬಳಿ ಶುಭಾರಂಭಗೊಂಡಿತು.

ಈ ನೂತನ ಮಳಿಗೆಯನ್ನು ಮೈಸೂರು ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಹೆಚ್. ಎಸ್. ಪ್ರಕಾಶ್ ಉದ್ಘಾಟಿಸಿದರು. ಬೆಲಗೋಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಭದ್ರಮ್ಮ ಅವರು ಆಗಮಿಸಿ ಶುಭಹಾರೈಸಿದರು.

ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪೆರ್ಡೂರು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಪರಿಶ್ರಮದಿಂದ, ಸಮಾಜದ ಹಾಗೂ ಗ್ರಾಹಕರ ಸಹಕಾರದಿಂದ ಈ ಸಂಸ್ಥೆ ಏಳು ಮಳಿಗೆಯನ್ನು ಹೊಂದುವಂತಾಗಿದೆ , ನಮ್ಮ ಕುಲಕಸುಬನ್ನು ರಕ್ಷಿಸಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುವುದು ಎಂದರು.

ಕ್ರೆಡಿಟ್ ಐ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಮ್. ಪಿ. ವರ್ಷ, "ಕ್ಲೇ ಕಾರ್ಟ್‌" ಶೋರೂಮ್‌ನ ಕಟ್ಟಡ ಮಾಲೀಕರಾದ ಶ್ರೀ ಮಲ್ಲೇಶಯ್ಯ ಸಂಸ್ಥೆಗೆ ಆಗಮಿಸಿ ಶುಭಾಶಯ ಕೋರಿದರು. ಸಂಸ್ಥೆಯ ಉಪಾಧ್ಯಕ್ಷ ಶಂಕರ ಕುಲಾಲ್‌

ಪೆರಂಪಳ್ಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕುಲಾಲ್‌ ಪಟ್ಲ , ನಿರ್ದೇಶಕರಾದ ಉದಯ ಕುಲಾಲ್ ಕುಡ್ತೂರುಬೈಲು, ಯು. ಸುಂದರ ಕುಲಾಲ್ ಅಲೆವೂರು,

 ಶೇಖರ ಕುಲಾಲ್ ಕುಕ್ಕಿಕಟ್ಟೆ ಉಡುಪಿ, ಸುಧಾಕರ ಕುಲಾಲ್ ಕನ್ನಾರು, ಸಂದೀಪ್ ಕುಲಾಲ್ ಶಂಕರಪುರ, ಹರೀಶ್ ಕುಲಾಲ್ ಹಂದಿಬೆಟ್ಟು, ಜಗನ್ನಾಥ ಕುಲಾಲ್ ಶಿವಪುರ, ಸತೀಶ್ ಕುಲಾಲ್ ನಡೂರು, ರವೀಂದ್ರ ಕುಲಾಲ್ ಚೇರ್ಕಾಡಿ, ಶ್ರೀಮತಿ ಪ್ರಫುಲ್ಲಾ ಎಸ್. ಕುಲಾಲ್ ಬೈರಂಪಳ್ಳಿ, ಶ್ರೀಮತಿ ಶ್ಯಾಮಲಾ ಕೆ, ಕುಲಾಲ್ ಪೆರ್ಡೂರು, ಸಲಹಾಸಮಿತಿಯ ಡಾ| ಎಂ. ವಿ. ಕುಲಾಲ್ ಕುಂದಾಪುರ, ಶ್ರೀ ದಿವಾಕರ ಕುಲಾಲ್ ಪಟ್ಲ , "ಕ್ಲೇ ಕಾರ್ಟ್ಸ್" ಸಮಿತಿಯ ರಾಮ ಕುಲಾಲ್ ಪಕ್ಕಾಲ್, ಐತು ಕುಲಾಲ್ ಕನ್ಯಾನ ಮತ್ತಿತರರು ಉಪಸ್ಥಿತರಿದ್ದರು

Leave a Comment