ಬಂಟ್ವಾಳ: ಜೆಸಿಐ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ಬಂಟ್ವಾಳ ಟೌನ್, ರೋಟರಿ ಕ್ಲಬ್ ಮೊಡಂಕಾಪು, ರೋಟರಿ ಕ್ಲಬ್ ಪಲ್ಗುನಿ ಸಿದ್ದಕಟ್ಟೆ ಜೊತೆಗೂಡಿ ಪ್ಲಾಸ್ಟಿಕ್ ಮುಕ್ತ ಭಾರತ ಜಾಥವನ್ನು ಬಿ ಸಿ ರೋಡ್ ಜಂಕ್ಸನ್ ನಿಂದ ಕೈಕಂಬ ವರೆಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಪರಿಸರದ ಜನತೆಗೆ ಬಟ್ಟೆ ಚೀಲ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ಬಂಟ್ವಾಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರೋಟರಿ ಬಂಟ್ವಾಳ
ಟೌನ್ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಜೆಸಿಐ ಬಂಟ್ವಾಳದ ಅಧ್ಯಕ್ಷ ರೋಶನ್ ರೈ,ಪಿ ಎ ರಹೀಮ್,ಉಮೇಶ್ ಮೂಲ್ಯ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.














