ಬಂಟ್ವಾಳ : ಇಲ್ಲಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಸಮಾಜಮುಖಿ ಕಾರ್ಯದ ಮೂಲಕ ಸತತ 3 ವರ್ಷ ಪೂರೈಸಿದ ಹಿನ್ನಲೆಯಲ್ಲಿ 44 ಆಶಕ್ತ ಕುಟುಂಬಗಳಿಗೆ ಸುಮಾರು 14,21ಲಕ್ಷ ರೂ. ಸಹಾಯನಿಧಿ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಹಾಗೆಯೇ ಸುಮಾರು 130ಕ್ಕೂ ಹೆಚ್ಚು ಸಮಾಜಿಕ ಕಾರ್ಯಕರ್ತರನ್ನು ಹಾಗೂ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಂಘ ಸಂಸ್ಥೆಗಳನ್ನೂ ಗುರುತಿಸಿ ಗೌರವಿಸಲಾಯಿತು.
ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ.ಪುರುಷೋತ್ತಮ ಶೆಣೈ ಸಭಾಧ್ಯಕ್ಷತೆ ವಹಿಸಿದ್ದರು. ದೇವಳದ ಮೊಕ್ತೇಸರರಾದ ಪಿ.ಪ್ರವೀಣ್ ಕಿಣಿ, ಬಂಟ್ವಾಳ ಜಿ.ಎಸ್.ಬಿ ಸೇವಾ ಸಂಘದ ಅಧ್ಯಕ್ಷರಾದ ಲಕ್ಸ್ಮಿ ನಾರಾಯಣ ಮಲ್ಯ,ಪತ್ರಕರ್ತ ವಾಲ್ಟರ್ ನಂದಳಿಕೆ,ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿಯಾದ ಪದ್ಮರಾಜ್ , ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೀತಾಂಜಲಿ ಎಂ. ಸುವರ್ಣ,ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪಿಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಜಿ ವಿಭಾಗದ ಮುಖ್ಯಸ್ಥರಾದ ವಾಸುದೇವ ಭಟ್, ಬಂಟ್ವಾಳದ ಸ್ವರ್ಣೋದ್ಯಮಿ ನಾಗೇಂದ್ರ ಬಾಳಿಗಾ,ಮೂಡಬಿದ್ರೆ ಸ್ಫೂರ್ತಿ
ಮಕ್ಕಳ ಶಾಲೆ ಅರಮನೆ ಬಾಗಿಲು ಸಂಸ್ಥಾಪಕರಾದ ಪ್ರಕಾಶ್.ಜೆ.ಶೆಟ್ಟಿಗಾರ್,ಬೆಳ್ಮಣ್ ಹುಮ್ಯಾನಿಟಿ ಟ್ರಸ್ಟ್ ಅಧ್ಯಕ್ಷ ರೋಷನ್ ಬೆಳ್ಮಣ್ ಅತಿಥಿಗಳಾಗಿ ಭಾಗವಹಿಸಿದ್ದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಕಾರ್ಯದರ್ಶಿ ಸಂಜಯ್ ಭಟ್, ಕೋಶಾಧಿಕಾರಿ ಭಾಗ್ಯಶ್ರೀ ಭಂಡಾರ್ಕರ್, ಸದ್ಯಸರಾದ ಗಿರೀಶ್ ಪೈ, ಸುಧೀರ್ ಪೈ, ರಮೇಶ್ ಶೆಣೈ, ರಮಾಕಾಂತ್ ಶೆಣೈ, ವೆಂಕಟರಮಣ ಪ್ರಭು, ಸತೀಶ್ ನಾಯಕ್, ಶ್ರೀನಿವಾಸ್ ಪೈ, ಗಣೇಶ್ ಪೈ, ಶ್ರೀನಿವಾಸ್ ಭಟ್, ಅಕ್ಷಯ್ ಕುಲಾಲ್, ರಾಧಿಕಾ ಶೆಣೈ ಉಪಸ್ಥಿತರಿದ್ದರು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಕಳೆದ 3 ವರ್ಷದಲ್ಲಿ 7೦೦ ಕ್ಕೂ ಹೆಚ್ಚು ಕುಟುಂಬಗಳಿಗೆ 4 ಕೋಟಿ ರೂ.ವಿಗಿಂತಲೂ ಅಧಿಕ ಧನಸಹಾಯ ನೀಡಿದೆ.














