ಬಂಟ್ವಾಳ :ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಲಯನ್ಸ್ ಜಿಲ್ಲೆ 317D ಯ ರಾಜ್ಯಪಾಲರಾದ ಲಯನ್ ಬಿ ಎಂ ಭಾರತಿ ಯವರ ಅಧಿಕೃತ ಭೇಟಿ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ , ಲಯನ್ಸ್ ಸೇವಾ ಟ್ರಸ್ಟ್ ಮತ್ತು ಬಂಟ್ವಾಳ ಪುರಸಭೆ ಸಹಯೋಗದೊಂದಿಗೆ ಬಿ ಸಿ ರೋಡ್ ಸರ್ಕಲ್ ಬಳಿ ನಗರ ಸುಂದರೀಕರಣ ಯೋಜನೆ ಅಂಗವಾಗಿ ಸಿದ್ಧಗೊಳಿಸಿದ "ಡಾ.ವಸಂತ ಬಾಳಿಗಾ ಲಯನ್ಸ್ ಅವೆನ್ಯೂ" ಪಾರ್ಕ್ ನ್ನು ರಾಜ್ಯಪಾಲರು ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ಪುರಸಭಾ ಅಧ್ಯಕ್ಷರಾದ ವಾಸು ಪೂಜಾರಿ, ಬುಡಾ ಅಧ್ಯಕ್ಷರಾದ ಭೇಬಿ ಕುಂದರ್ , ಪುರಸಭಾ ಸದಸ್ಯೆ ಜೀನತ್, ಸ್ಥಾಪಕಾಧ್ಯಕ್ಷರಾದ ಡಾ.ಬಿ ವಸಂತ ಬಾಳಿಗಾ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ವಸಂತ ಕುಮಾರ್ ಶೆಟ್ಟಿ ಮುಂತಾದ ಅತಿಥಿಗಳು ಈ ಯೋಜನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ನಿರ್ಮಲ ಹೃದಯ ವಿಶೇಷ ಮಕ್ಕಳ
ಪಾಲನಾ ಕೇಂದ್ರದ ವಿದ್ಯಾರ್ಥಿಗಳ ನೃತ್ಯ ಹಾಗೂ ಛದ್ಮವೇಷ ಕಾರ್ಯಕ್ರಮ ಬಹಳ ಆಕರ್ಷಕವಾಗಿ ನೆರವೇರಿತು. ಲಯನ್ಸ್ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಶಿವಾನಂದ ಬಾಳಿಗಾ , ಕೋಶಾಧಿಕಾರಿ ಸುನೀಲ್ ಬಿ , ಲಯನ್ಸ್ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ದೇವಿಕಾ ದಾಮೋದರ್ , ಕೋಶಾಧಿಕಾರಿ ದೇವಪ್ಪ ಪೂಜಾರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು,ಹಿತೈಷಿಗಳು ಉಪಸ್ಥಿತರಿದ್ದರು.ತಪೋದನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀನಿವಾಸ್ ಪೂಜಾರಿ ಧನ್ಯವಾದ ಸಮರ್ಪಿಸಿದರು.














