ಬಂಟ್ವಾಳ : ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ ಮತ್ತು ಇಸ್ಫರ್ಮೇಶನ್ ಸೈನ್ಸ್ ವಿಭಾಗದ ಸಹಯೋಗದಲ್ಲಿ ಭವಿಷ್ಯದ ತಂತ್ರಜ್ಞಾನ, , ಮೂಲಭೂತಗಳು, ಐಒಟಿ, ಎಂಎಲ್. ಸೈಬರ್ ಸೆಕ್ಯೂರಿಟಿ, ಬ್ಲಾಕ್ ಚೈನ್ ವಿಷಯದಲ್ಲಿ ಉದಯೋನ್ಮುಖ ತಂತ್ರಜ್ಞಾನ ಕುರಿತ ಎರಡು ದಿನಗಳ ಬೋಧನಾ ಕಾರ್ಯಾಗಾರವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜ.11ರಂದು ಶನಿವಾರ ಆರಂಭಗೊಂಡಿತು.
ಕರುನಾಡು ಟೆಕ್ನಾಲಜಿಯ ಸಿಇಒ ಮಹೇಶ್ ಡೆಜಿನಲ್, ಸಿಟಿಓ ಮಹೇಶ್ ಎನ್, ನಿಟ್ಟೆಯ ಪ್ರಾಧ್ಯಾಪಕರಾದ ಡಾ ರೋಶನ್ ಫೆರ್ನಾಂಡಿಸ್, ಅಭಿಷೇಕ್ ಎಸ್ ರಾವ್, ಕು. ತನ್ಸೀಲಾ ನರ್ಗಿಸ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾಲೇಜಿನ ಉಪ ಪ್ರಾಚಾರ್ಯ ಡಾ. ಡೇಮಿಯನ್ ಡಿ ಮೆಲ್ಲೋ, ಕಂಪ್ಯೂಟರ್ ಸೈನ್ ವಿಭಾಗ ಮುಖ್ಯಸ್ಥ ಡಾ. ಕಾರ್ತಿಕ್
ಪೈ ಬಿ. ಇನ್ಫರ್ಮೇಶನ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಹೆಚ್. ಮನೋಜ್ ಟಿ. ಗಡಿಯಾರ್, ಕಾರ್ಯಕ್ರಮದ ಸಂಯೋಜಕ ರಾಜ್ಗೋಪಾಲ್ ಕೆ.ಟಿ. ಉಪಸ್ಥಿತರಿದ್ದರು. ಕಾರ್ಯಾಗಾರವು ಬೋಧಕರಿಗೆ ಐಒಟಿ, ಎಂಎಲ್. ಸೈಬರ್ ಸೆಕ್ಯೂರಿಟಿ, ಬ್ಲಾಕ್ ಚೈನ್ ಮೂಲಭೂತ ವಿಷಯದಲ್ಲಿ ಉದಯೋನ್ಮುಖ ತಂತ್ರಜ್ಞಾನ ಕುರಿತಂತೆ ಮಾಹಿತಿ, ಜ್ಞಾನಾನುಭವ ಒದಗಿಸಲಿದೆ.














