ದೇವಂದಬೆಟ್ಟು: :ಜ.14-18, ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ. ಜ.14ರಂದು ವಾರ್ಷಿಕ ಜಾತ್ರೆ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ.

Coastal Bulletin
ದೇವಂದಬೆಟ್ಟು: :ಜ.14-18, ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ. ಜ.14ರಂದು ವಾರ್ಷಿಕ ಜಾತ್ರೆ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ.

ಬಂಟ್ವಾಳ :ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ, ದೇವಂದಬೆಟ್ಟು ಕಳ್ಳಿಗೆ ಬಂಟ್ವಾಳ ಇಲ್ಲಿನ ಆರಾಧ್ಯ ಮೂರ್ತಿ ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14 ರವಿವಾರದಿಂದ ಜ.18ಗುರುವಾರದ ವರೆಗೆ ನಡೆಯಲಿದೆ.

ಜ.14ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10-00ರ ನಂತರ ಧ್ವಜಾರೋಹಣಗೊಂಡು ಐದು ದಿನಗಳ ತನಕ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಈ ಜಾತ್ರಾ ಮಹೋತ್ಸವವು ಜರಗಲಿದೆ.

ಜಾತ್ರಾ ಸಂದರ್ಭದಲ್ಲಿ ಬಲಿ ಉತ್ಸವ, ತುಲಾಭಾರ ಸೇವೆ,ಮಹಾಪೂಜೆ, ಭಜನಾ ಸಂಕೀರ್ತನೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ.ಜ.17ರಂದು

ಗುರುವಾರ ಸಂಜೆ 5.30ಯಿಂದ ಶ್ರೀ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಹಸಿರುವಾಣಿ ಹೊರೆಕಾಣಿಕೆ:

ಜ.14ರಂದು ಆದಿತ್ಯವಾರ ದೇವಾಲಯದ ವಾರ್ಷಿಕ ಜಾತ್ರೆ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಬೆಳಿಗ್ಗೆ ಗಂಟೆ 9-00ಕ್ಕೆ ಬ್ರಹ್ಮರಕೂಟ್ಟು ಶ್ರೀ ಮೂಕಾಂಬಿಕಾ ಕೃಪಾ ಶ್ರೀರಾಮ ಭಜನಾ ಮಂದಿರದಿಂದ ಹೊರಡಲಿದೆ ಎಂದು ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.

Leave a Comment