ಬಿ ಸಿ ರೋಡ್: ಒಂದು ತಿಂಗಳ ಕಾಲ ನಡೆಯುವ "ಬಂಟ್ವಾಳ ಉತ್ಸವ"ಕ್ಕೆ ಚಾಲನೆ.

Coastal Bulletin
ಬಿ ಸಿ ರೋಡ್: ಒಂದು ತಿಂಗಳ ಕಾಲ ನಡೆಯುವ "ಬಂಟ್ವಾಳ ಉತ್ಸವ"ಕ್ಕೆ ಚಾಲನೆ.

ಬಂಟ್ವಾಳ : ಬಂಟ್ವಾಳ ಫೆಸ್ಟ್ ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗ್ರಾಹಕರ ಮೇಳ, ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನ “ಬಂಟ್ವಾಳ ಉತ್ಸವ”ಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಚಾಲನೆ ನೀಡಿದರು.

ಬಳಿಕ ಮಾತನಾಡಿ ಸಮಾಜದ ಎಲ್ಲಾ ವರ್ಗದ ಜನರು ಈ ಉತ್ಸವದ ಮೂಲಕ ಒಟ್ಟು ಸೇರಿ ಒಂದು ತಿಂಗಳ ಕಾಲ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿ, ಸಂಘಟಕರ ಸಮಾಜಮುಖಿ ಉದ್ದೇಶದೊಂದಿಗೆ ಪ್ರಾರಂಭವದ ಬಂಟ್ವಾಳ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲೆ, ಸಂಸ್ಕøತಿಯ ಬೆಳವಣಿಗೆಗೆ ಯಾರು ಪ್ರಯತ್ನಿಸಿದರೂ ಅದಕ್ಕೆ ಸದಾ ಬೆಂಬಲ ಇದೆ ಎಂದರು.ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಬಂಟ್ವಾಳ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಜಿ ಪಂ ನಿಕಟಪೂರ್ವ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಉಪಾಧ್ಯಕ್ಷ ಮೂನಿಶ್ ಅಲಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ, ಗಾಣಿಗ ಸಂಘದ

ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ನ್ಯಾಯವಾದಿ ಉಮೇಶ್ ಕುಮಾರ್ ವೈ, ಉದ್ಯಮಿ ಹಂಝ ಬಸ್ತಿಕೋಡಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಪುರಸಭಾ ನಾಮನಿರ್ದೇಶಿತ ಸದಸ್ಯ ಜಗದೀಶ್ ಕುಂದರ್ ಭಂಡಾರಿಬೆಟ್ಟು, ಶಿಕ್ಷಕಿ ಜ್ಯೋತಿ ಮಾರ್ಟಿನ್ ಮೊದಲಾದವರು ಭಾಗವಹಿಸಿದ್ದರು. 

ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಸಂಜೆ ವೇಳೆ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಇದೇ ವೇಳೆ ಐವರು ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು. ಉತ್ಸವ ಸಮಿತಿಯ ವ್ಯವಸ್ಥಾಪಕರಾದ ಮಹಮ್ಮದ್ ನಂದಾವರ, ನವೀನ್ ಕುಮಾರ್, ಶಿವಪ್ರಸಾದ್ ಬಂಟ್ವಾಳ, ವಿಶ್ವನಾಥ ಕೊಟ್ಟಾರಿ ಸಜಿಪ, ಇಂಡಿಯನ್ ಅಮ್ಯೂಸ್ ಮೆಂಟ್ ಇದರ ನಾಸಿರ್ ಕಾವಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಸೌಮ್ಯ ಯಶವಂತ ಭಂಡಾರಬೆಟ್ಟು ಸ್ವಾಗತಿಸಿ, ಇಬ್ರಾಹಿಂ ಕೈಲಾರ್ ವಂದಿಸಿದರು. ಶ್ರೀಶ ವಾಸವಿ ತುಳುನಾಡು ಕಾರ್ಯಕ್ರಮ ನಿರೂಪಿಸಿದರು.

Leave a Comment