Coastal Bulletin

ಮಂಗಳೂರು : ಆರೋಗ್ಯ ವೇ ಭಾಗ್ಯ ಯೋಜನೆಯೊಂದಿಗೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.) ಪೆರ್ಡೂರು ಇದರ ಸಹಸಂಸ್ಥೆಯಾದ ಪಾರಂಪರಿಕ ಹಾಗೂ ಅತ್ಯಾಧುನಿಕ ಶೈಲಿಯ ಮಣ್ಣಿನ ವಿಭಿನ್ನ ವಸ್ತುಗಳ ಮಾರಾಟ ಮಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿನ್ನಮಂಗಲ, ಸ್ಪರ್ಶ್ ಮಸಾಲ ಕಾರ್ಖಾನೆ ಹತ್ತಿರ "ಕ್ಲೆಕಾಟ್ಸ್೯"ನ 6 ನೇ ಬೃಹತ್ ಶೋರೂಮ್‌ ಶುಕ್ರವಾರ ಶುಭಾರಂಭಗೊಂಡಿತು.

ನೆಲಮಂಗಲ ನಗರಸಭೆಯ ಅಧ್ಯಕ್ಚರಾದ ಶ್ರೀಮತಿ ಲತಾ ಹೇಮಂತ್ ಕುಮಾರ್‌ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಶಿವಕುಮಾರ ಚೌಡ ಶೆಟ್ಟಿ,ದೀಪ ಪ್ರಜ್ವಲನೆಗೈದರು.

ಸಂಘದ ಅಧ್ಯಕ್ಷರಾದ ಸಂತೋಷ್

ಕುಲಾಲ್ ಪೆರ್ಡೂರು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಹಿರಿಯರು ಕಟ್ಟಿ ಬೆಳೆಸಿದ ಕುಲಕಸುಬನ್ನು ರಕ್ಷಿಸಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಆರೋಗ್ಯ ಹಾಗೂ ವಾಸ್ತು ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.

Leave a Comment