ಬಂಟ್ವಾಳ: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಸಂಜೀವ ಪೂಜಾರಿ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಚುನಾವಣಾಧಿಕಾರಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಇವರು ಬಾನುವಾರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪಾಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಎಂ.ತುಂಬೆ, ಜತೆ ಕಾರ್ಯದರ್ಶಿಯಾಗಿ ರಾಜೇಶ್ ಸುವರ್ಣ ಮಿತ್ತಬೈಲು, ಕೋಶಾಧಿಕಾರಿಯಾಗಿ ಆನಂದ ಸಾಲ್ಯಾನ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಹೇಮಂತ್ ಕುಮಾರ್ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆ.ಸಂಜೀವ ಪೂಜಾರಿ ಮೆಲ್ಕಾರ್, ರಾಮಚಂದ್ರ ಸುವರ್ಣ ತುಂಬೆ, ಗಿರೀಶ್ ಪೂಜಾರಿ ಬಸ್ರ, ರಾಜೇಶ್ ಸುವರ್ಣ, ಗೋಪಾಲಕೃಷ್ಣ ತುಂಬೆ, ವಾಸು ಪೂಜಾರಿ ಲೊರೆಟ್ಟೋ,
ಬೇಬಿ ಕುಂದರ್, ಶೈಲಜಾ ರಾಜೇಶ್, ಗಣೇಶ್ ಪೂಂಜರಕೋಡಿ, ಸತೀಶ್ ಬಿ., ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಉಮೇಶ್ ಸುವರ್ಣ ತುಂಬೆ, ಜಯಪ್ರಕಾಶ್ ಜೆ.ಎಸ್. ಜಕ್ರಿಬೆಟ್ಟು, ಪ್ರಭಾವತಿ ತುಂಬೆ, ವಿರೇಂದ್ರ ಅಮೀನ್ ವಗ್ಗ, ಮೋನಪ್ಪ ಮಜಿ,ಪ್ರಶಾಂತ್ ಕೋಟ್ಯಾನ್, ಗೋಪಾಲ ಪೂಜಾರಿ, ಶಂಕರ ಕಾಯರ್ಮಾರ್ ಇವರನ್ನು ಆಯ್ಕೆಗೊಳಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರಾದ ರಾಮಪ್ಪ ಸುವರ್ಣ, ಕೆ.ಹರಿಕೃಷ್ಣ ಬಂಟ್ವಾಳ್, ವಕೀಲ ಚಂದ್ರಶೇಖರ್ ಪೂಜಾರಿ ಮತ್ತಿತರರು ಇದ್ದರು.















