Coastal Bulletin

ಬಂಟ್ವಾಳ: ಸೆಲ್ಕೋ ಸೋಲಾರ್ ಲೈಟ್ ಪ್ರೈ. ಲಿ. ಬೆಂಗಳೂರು ಇದರ ಮಂಗಳೂರು ಶಾಖೆಯ ವತಿಯಿಂದ ಸೇವಾ ಶಿಬಿರ ತಾಲೂಕಿನ ವಾಮದಪದವು ಜಂಕ್ಷನ್‌ನಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.

ಕಾರ್ಯಕ್ರಮವನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು, ನ್ಯಾಯವಾದಿ ಶೈಲಜಾ ರಾಜೇಶ್ ಉದ್ಘಾಟಿಸಿದರು. ಅವರು ಮಾತನಾಡಿ ಸೆಲ್ಕೋ ಸಂಸ್ಥೆ ವಿಶ್ವಸನೀಯ ಸಂಸ್ಥೆಯಾಗಿದ್ದು ಸೇವೆಯ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಸೌರಶಕ್ತಿಯ ಬಳಕೆ ಅನಿವಾರ್ಯವಾಗುತ್ತಿದ್ದು ಸೌರಶಕ್ತಿಯ ಇಂಧನ ಹೆಚ್ಚು ಜನಪ್ರಿಯವಾಗುತ್ತಿದೆ. ಸೆಲ್ಕೋ ಸಂಸ್ಥೆ ಉದ್ಯಮದ ಹಿತಾಸಕ್ತಿಯನ್ನು ಮಾತ್ರ ಹೊಂದಿರದೆ ಸಮಾಜಮುಖಿ ಕಾರ್ಯದಲ್ಲೂ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದರು.

ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್

ರೈ, ಸೆಲ್ಕೋ ಸಂಸ್ಥೆಯ ಸಿಎಸ್‌ಡಿ ವಿಭಾಗದ ವಿಭಾಗೀಯ ವ್ಯವಸ್ಥಾಪಕಿ ಸುರೇಖಾ ಹೆಗ್ಡೆ, ಉದ್ಯಮಿ ಪುರುಷೋತ್ತಮ ಶೆಟ್ಟಿ , ಸೆಲ್ಕೋ ಹಿರಿಯ ಗ್ರಾಹಕ ಬೂಬ ನಾಯ್ಕ, ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಕೃಷಿ ಅಧಿಕಾರಿ ಜನಾರ್ದನ, ಒಕ್ಕೂಟದ ಅಧ್ಯಕ್ಷೆ ಕುಶಲ, ಜೆಸಿಐ ವಲಯಾಧಿಕಾರಿ ಸಂತೋಷ್ ಜೈನ್, ಸೇವಾ ಪ್ರತಿನಿಧಿಗಳಾದ ಮಾಧವ, ಮೋಹನದಾಸ್ ಗಟ್ಟಿ, ತಾರಾನಾಥ ಉಪಸ್ಥಿತರಿದ್ದರು.

ಸೆಲ್ಕೋ ಸಂಸ್ಥೆಯ ವಿನೋದ್ ಸ್ವಾಗತಿಸಿದರು, ಜಗದೀಶ್ ವಂದಿಸಿದರು, ಮಂಗಳೂರು ಶಾಖೆಯ ವ್ಯವಸ್ಥಾಪಕ ರವೀಣಾ ಬಿ. ಕಾರ್ಯಕ್ರಮ ನಿರೂಪಿಸಿದರು. ಲತೇಶ್ ಸಹಕರಿಸಿದರು.

Leave a Comment