ಪುಂಜಾಲಕಟ್ಟೆ: ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣಗಳು ಸಂಘಗಳ ಸಂಸ್ಥೆ ಹಾಗೂ ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವೃತ್ತಿ ಉತ್ಸವ ಎಂಬ ಕಾರ್ಯಕ್ರಮ ನಾರಾಯಣ ಗುರು ವಸತಿ ಶಾಲೆ ಪುಂಜಲಕಟ್ಟೆ ಬಂಟ್ವಾಳ ಇಲ್ಲಿ ಆಯೋಜಿಸಲಾಯಿತು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ತಮ್ಮ ತಮ್ಮ ಗುರಿ ಸಾಧನೆಗೆ ಸಹಕಾರವಾಗುವಂತ ಶಿಕ್ಷಣವನ್ನು ವಿದ್ಯಾರ್ಥಿಗಳು ತಮ್ಮ ತಮ್ಮ ಕೆಲಸಗಳನ್ನು ಚಟುವಟಿಕೆಯ ಮೂಲಕ ತೊಡಗಿಸಬೇಕೆಂದು ವಿವರಿಸಿದರು.
ಕಾರ್ಯಕ್ರಮದ ಮೂಲ ಉದ್ದೇಶ ತಮ್ಮ ಗುರಿ ತಲುಪಲು ಸಹಕಾರಿಯಾಗುವ ದಾರಿಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಕೌಶಲ್ಯ ಅಭಿವೃದ್ಧಿ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ.
ಕಾರ್ಯಕ್ರಮವನ್ನು ಜಿಲ್ಲಾ ಮೆನ್ಟರ್ ಲೀಡರ್ ಆಗಿರುವ ಶ್ರೀಯುತ ಅಲ್ಲಭಕ್ಷರ ರವರು ದೀಪ ಪ್ರಜ್ವಲನೆಯ ಮೂಲಕ
ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಮುಂದಿನ ಗುರಿ ನಿರ್ಧಾರ ಏಕೆ ಮುಖ್ಯವೆಂಬ ವಿಷಯದ ಕುರಿತು ತಿಳಿಸಿದರು ಮತ್ತು ವಿದ್ಯಾರ್ಥಿಗಳ ಮುಂದಿನ ವಾರ್ಷಿಕ ಪರೀಕ್ಷೆಗೆ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶಾಲಾ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಪ್ರಶ್ನೆ ಹೇಗೆ ಬಗೆಹರಿಸಲು ಎಷ್ಟರಮಟ್ಟಿಗೆ ಈ ಕಾರ್ಯಕ್ರಮ ಸಹಾಯಕವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಪ್ರಮೀಳಾ ಪೂಜಾರಿ ಹಾಗೂ ಶ್ರೀಮತಿ ಆಶಾಲತಾ, ಹಾಗೂ ಶಿಕ್ಷಕಿ ಹರ್ಷಿತ ಉಪಸ್ಥಿರಿದರು.















