ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ ಸಂಭ್ರಮದ 35ನೇ ವರ್ಷದ ವಾರ್ಷಿಕೋತ್ಸವದ* ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ಬೆಳಿಗ್ಗೆ ಆರಾಧ್ಯ ದೇವರಾದ ಶ್ರೀ ಶಾರದಾ ಮಾತೆಗೆ ಹಾಗೂ ಊರಿನ ದೈವ ದೇವರಿಗೆ ನಮಸ್ಕರಿಸಿ ಬಿಡುಗಡೆಗೊಳಿಸಲಾಯಿತು.
ಏ.07. ಶುಕ್ರವಾರ ಆಶೀರ್ವಾದ್ ಸಂಘದಲ್ಲಿ ಬೆಳಿಗ್ಗೆ ಗಣಹೋಮ, ಸಂಜೆ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ನಡೆಯಲಿದ್ದು, ದಿನಾಂಕ ಏ.08 ಶನಿವಾರ 35ನೇ ವರ್ಷದ ಸಂಭ್ರಮದ ವರ್ಷಾಚರಣೆ ನಡೆಯಲಿದೆ. ಅಂದು ರಾತ್ರಿ ಅಂಗನವಾಡಿ ಮಕ್ಕಳು, ಸ್ಥಳೀಯ ಪ್ರತಿಭೆಗಳಿಂದ, ಸಂಘದ ಸದಸ್ಯರು ಹಾಗೂ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾನ-ನೃತ್-ವೈಭವ ಸೇರಿದಂತೆ, ಮರಪಡಾ...! ನೆಂಪು ದೀಲ...! ನಾಟಕ ಪ್ರದರ್ಶನಗೊಳ್ಳಲಿದೆ.
ಈ ಸಂದರ್ಭದಲ್ಲಿ ಆಶೀರ್ವಾದ್ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಅಧ್ಯಕ್ಷ ಚೆನ್ನಕೇಶವ ಬೊಳ್ಳಾರಿ, ಕಾರ್ಯದರ್ಶಿ ಪ್ರವೇಶ್ ಬೊಳ್ಳಾರಿ, ಕೋಶಾಧಿಕಾರಿ ಉಮೇಶ್ ಕುಚ್ಚಿಗುಡ್ಡೆ, ಆಶೀರ್ವಾದ್ ಸೇವಾ ಸಂಘ ಗೌರವ ಸಲಹೆಗಾರರಾದ ದೇವಪ್ಪ ಗೌಡ ಬೊಳ್ಳಾರಿ,
ಪ್ರದೀಪ್ ಕುಮಾರ್ ಮುದಲ್ಮೆ, ಅರ್ಚಕರಾದ ಸುಧಾಕರ ಕೊಟ್ಟಿಂಜ, ಸಂಚಾಲಕದ ಸುಶಾನ್ ಬೊಳ್ಳಾರಿ, ಸಹ ಸಂಚಾಲಕ ವಿನೋದ್ ಬೊಳ್ಳಾರಿ, ಜೊತೆ ಕಾರ್ಯದರ್ಶಿ ಶ್ರವಣ್ ಬೊಳ್ಳಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಸೂರಜ್ ಬೊಳ್ಳಾರಿ, ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯ ಅಧ್ಯಕ್ಷ ವಿಜಯ್ ಕುಮಾರ್ ಕಜೆಕಂಡ, ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಮುಖ್ ಆಶೀತ್ ತುಂಬೆ, ಆಶೀರ್ವಾದ್ ಮಹಿಳಾ ಸೇವಾ ಸಂಘದ ಗೌರವಾಧ್ಯಕ್ಷೆ ಪಾರ್ವತಿ ಐತ್ತಪ್ಪ ಕುಲಾಲ್ ಮುದಲ್ಮೆ, ಅಧ್ಯಕ್ಷೆ ಜಲಜಾಕ್ಷಿ ವಿಜಯ್ ಕೋಟ್ಯಾನ್ ಮುದಲ್ಮೆ, ಸಂಘಟನಾ ಕಾರ್ಯದರ್ಶಿ ಶುಭ ಗಣೇಶ್ ಸುವರ್ಣ, ದಿವ್ಯಾ ಸಂತೋಷ್ ಬೊಳ್ಳಾರಿ, ಕ್ರೀಡಾ ವೈಷ್ಣವಿ ಬೊಳ್ಳಾರಿ ಸೇರಿದಂತೆ ಸಂಘದ ಸದಸ್ಯರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.














