ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ತುಂಬೆ ಗ್ರಾಮ ಪಂಚಾಯತ್ ಹಾಗೂ ಪಶು ಸಂಗೋಪನಾ ಇಲಾಖೆ ಬಂಟ್ವಾಳ ಇದರ ಸಹಯೋಗದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆ ಹಾಗೂ ಅವುಗಳಿಗೆ ರೇಬಿಸ್ ರೋಗನಿರೋಧಕ ಲಸಿಕಾ ಶಿಬಿರವನ್ನು ಜಿಲ್ಲೆಯಲ್ಲೇ ತುಂಬೆ ಗ್ರಾಮ ಪಂಚಾಯತ್ ಮೊದಲಿಗರಾಗಿ ಅನುಷ್ಠಾನಗೊಳಿಸಿ, ಬೀದಿ ನಾಯಿಗಳನ್ನು ಸೆರೆಹಿಡಿಯುವ ಮೂಲಕ ಅ.11ರಂದು ಬುಧವಾರ ಬೆಳಿಗ್ಗೆ ತುಂಬೆಯಲ್ಲಿ ಕಾರ್ಯಾಚರಣೆ ನಡೆಸಿತು.
ಈ ಸಂದರ್ಭದಲ್ಲಿ ಸುಮಾರು 25 ಬೀದಿ ನಾಯಿಗಳನ್ನು ಬಲೆ ಮೂಲಕ ಸೆರೆಹಿಡಿದು ಆಧುನಿಕ,ಸುಧಾರಿತ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ,ಆ್ಯಂಟಿ ರೇಬಿಸ್ ಲಸಿಕೆ ನೀಡಿದ ಬಳಿಕ ಅದೇ ದಿನ ಸ್ವಸ್ಥಾನಗಳಲ್ಲಿ ಬಿಡಲಾಯಿತು.
ಪ್ರಮುಖರಾದ
ತುಂಬೆ ಗ್ರಾ ಪಂ ಉಪಾಧ್ಯಕ್ಷರಾದ ಗಣೇಶ ಸಾಲಿಯಾನ್ ತುಂಬೆ, ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ವೇಣುಗೋಪಾಲ್ ಕೊಟ್ಟಾರಿ, ವಿಲಿಯಂ ಡಿ ಸೋಜಾ, ಹಾಗೂ ಸಿಬ್ಬಂದಿ ವರ್ಗ, ಸ್ಥಳೀಯರು ಮತ್ತಿತರರು ಕಾರ್ಯಾಚರಣೆಯಲ್ಲಿ ಸಹಕರಿಸಿದರು.















