ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಪುದು ಮಹಾ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಸುಕೇಶ್ ಶೆಟ್ಟಿ ತೇವು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಬಾ ಜ ಪಾ ದ ತಳಮಟ್ಟದ ಕಾರ್ಯಕರ್ತರಾಗಿ, ಪುದು ಮಹಾ ಶಕ್ತಿ ಕೇಂದ್ದ ಪ್ರದಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ
ಸುಕೇಶ್ ಶೆಟ್ಟಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫರಂಗಿಪೇಟೆ ಒಕ್ಕೂಟದ ಅಧ್ಯಕ್ಷರಾಗಿ ಕಳೆದ 4 ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ಪ್ರ. ಕಾರ್ಯದರ್ಶಿಯಾಗಿ ರೂಪೇಶ್ ಜ್ಯೋತಿ ಗುಡ್ಡೆ ಆಯ್ಕೆಯಾಗಿದ್ದಾರೆ.














