Coastal Bulletin

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಜನಜಾಗೃತಿ‌ ವೇದಿಕೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಜೂ.7 ರಿಂದ 14 ರವರೆಗೆ ಎಂಟು ದಿನಗಳ ಕಾಲ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿರುವ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿಯ ಉನ್ನತೀ ಸೌಧ ಸಭಾಂಗಣದಲ್ಲಿ ನಡೆಯಿತು.

ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿದರು. ಜನಾಜಗೃತಿ ವೇದಿಕೆ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಶಿಬಿರದ ವ್ಯವಸ್ಥಾಪನ ಸಮಿತಿಯನ್ನು ರಚಿಸಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ರೋನಾಲ್ಡ್ ಡಿಸೋಜಾ, ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ, ಯೋಜನಾಧಿಕಾರಿ ಜಯಾನಂದ ಉಪಸ್ಥಿತರಿದ್ದರು.

ಈ ಸಂದರ್ಭ ಶಿಬಿರದ ವ್ಯವಸ್ಥಾಪನ ಸಮಿತಿ ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ ಡಾ. ವಸಂತ ಬಾಳಿಗ, ಅಧ್ಯಕ್ಷರಾಗಿ, ಐತಪ್ಪ ಆಳ್ವ ಸುಜೀರ್ ಗುತ್ತು, ಉಪಾಧ್ಯಕ್ಷರಾಗಿ ಮಂಜುನಾಥ ಆಚಾರ್ಯ, ಅರುಣ್

ರೋಷನ್ ಡಿಸೋಜಾ, ಧರ್ಣಪ್ಪ ಪೂಜಾರಿ, ವಿಶ್ವನಾಥ ಬಿ., ಮಹಮ್ಮದ್ ನಂದಾವರ ಗೌರವ ಸಲಹೆಗಾರರಾಗಿ ಜಗದೀಶ್ ಕೊಯಿಲ, ವಿಜಯ ರೈ, ಪ್ರಮೋದ್ ಕುಮಾರ್, ಪುಷ್ಪರಾಜ್ ಹೆಗ್ಡೆ, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮುಳ್ಳುಂಜ ವೆಂಕಟೇಶ್ ಭಟ್, ಸಂದೀಪ್ ಮೊಡಂಕಾಪು, ಪ್ರವೀಣ್ ಆಳ್ವ, ಸುಭಾಶ್ಚಂದ್ರ ಜೈನ್

ಭಾಸ್ಕರ ಚೌಟ, ಚಂದಪ್ಪ ಮೂಲ್ಯ, ದೇವಪ್ಪ ಕುಲಾಲ್ ಪಂಜಿಕಲ್ಲು ಆಯ್ಕೆಯಾದರು. ಶಿಬಿರದ ಪ್ರಧಾನ ಸಂಚಾಲಕರಾಗಿ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,  ಸಂಚಾಲಕರಾಗಿ ಯೋಜನಾಧಿಕಾರಿ ಜಯಾನಂದ ಪಿ., ಕಾರ್ಯದರ್ಶಿಯಾಗಿ ಮೇಲ್ವಿಚಾರಕರಾದ ಕೇಶವ, ಅಮಿತಾ, ವೇದಾವತಿ, ಮಮತಾ, ಜೊತೆ ಕಾರ್ಯದರ್ಶಿಯಾಗಿ ಶೇಖರ್ ಸಾಮಾನಿ,ಚಿದಾನಂದ ರೈ ಕಕ್ಯ ಅವರನ್ನು ಆಯ್ಕೆಗೊಳಿಸಲಾಯಿತು.

Leave a Comment