ಸಾಲೆತ್ತೂರು: ಸಂಸ್ಕಾರ ಭಾರತೀ ಅಶ್ರಯದಲ್ಲಿ ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಉದ್ಘಾಟನೆ. ಸಂಸ್ಕಾರವು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುತ್ತದೆ: ರಂಗನಾಥ ರೈ ಬೆಳಿಯೂರು ಗುತ್ತು.

Coastal Bulletin
ಸಾಲೆತ್ತೂರು: ಸಂಸ್ಕಾರ ಭಾರತೀ ಅಶ್ರಯದಲ್ಲಿ ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಉದ್ಘಾಟನೆ. ಸಂಸ್ಕಾರವು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುತ್ತದೆ: ರಂಗನಾಥ ರೈ ಬೆಳಿಯೂರು ಗುತ್ತು.

ಬಂಟ್ವಾಳ :ಬಾಲ್ಯದಲ್ಲೇ ಲವಲವಿಕೆಯ ಬದುಕಿಗೆ ಶಿಸ್ತಿನ ಬೆರಗು ತುಂಬುವ ಪ್ರಯತ್ನವಾಗಿ ಸಂಸ್ಕಾರ ಸೌರಭದ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ರಜಾ ಶಿಬಿರದ ಉದ್ಘಾಟನಾ ಸಮಾರಂಭ ದ ಅಧ್ಯಕ್ಷತೆ ವಹಿಸಿದ ನಿವೃತ್ತ ಸೈನಿಕರಾದ ರಂಗನಾಥ ರೈ ಬೆಳಿಯೂರು ಗುತ್ತು ರವರು ಅಧ್ಯಕ್ಷೀಯ ಮಾತುಗಳ ಮೂಲಕ ಮಕ್ಕಳ ಭವಿಷ್ಯ ಕಟ್ಟುವಲ್ಲಿ ಶಿಬಿರದ ಪಾತ್ರವನ್ನು ಪ್ರಶಂಸಿಸಿದರು.

ಅವರು ತಾಲೂಕು ಸಂಸ್ಕಾರ ಭಾರತೀ ಮತ್ತು ನವಚೇತನ ಅಯ್ಯಪ್ಪ ಸೇವಾ ಟ್ರಸ್ಟ್(ರಿ), ಸಾಲೆತ್ತೂರು ಇವರ ಸಹಯೋಗದಲ್ಲಿ ಆಯೋಜಿಸಲಾದ ಮಕ್ಕಳ ಹಬ್ಬ ಬೇಸಿಗೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಬಿರದ ಉದ್ಘಾಟನೆ ನೆರವೇರಿಸಿದ ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ನಿಶ್ಚಲ್ ಶೆಟ್ಟಿಯವರು, “ತಂದೆ-ತಾಯಿಯರ ಸಂಸ್ಕಾರ ಜೀವನದ ದಾರಿದೀಪವಾಗುತ್ತದೆ” ಎಂಬ ಮಾತುಗಳ ಮೂಲಕ ಪೋಷಕರ ಜವಾಬ್ದಾರಿ ಕುರಿತು ಅರಿವು ಮೂಡಿಸಿದರು. 

ಶಿಬಿರದಲ್ಲಿ ಭಾರತ ಮಾತೆಯ ಛಾಯಾಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಚಿಣ್ಣರ ಲೋಕ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಚಂದ್ರಹಾಸ ರೈ ಬಾಲಾಜಿ ಬೈಲು ಅವರು, “ಜ್ಞಾನದಿಂದಲೇ ಸಂಸ್ಕಾರ, ಜ್ಞಾನದಿಂದಾಗಿ ಭಕ್ತಿ, ಕರ್ಮಯೋಗ ಸಾಧನೆ ಸಾಧ್ಯ” ಎಂದು ಜ್ಞಾನದ

ಮಹತ್ವವನ್ನೂ, ಶಿಬಿರದ ಅವಶ್ಯಕತೆಯನ್ನೂ ವಿವರಿಸಿದರು.

ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಂಸ್ಕಾರ ಭಾರತೀ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಹಾಗೂ ನವಚೇತನ ಟ್ರಸ್ಟ್ ಸದಸ್ಯ ಸೋಮನಾಥ ಪೂಜಾರಿ ಶುಭ ಹಾರೈಸಿದರು. 

ಸಂಯೋಜಕಿ ಶ್ರೀಮತಿ ವಿಜಯ ಶೆಟ್ಟಿ ಪ್ರಾಸ್ತಾವಿಕ ನುಡಿ ನೀಡಿ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀಮತಿ ವಿನುತಾ ಶೆಟ್ಟಿ ಕೊಲ್ಲಾಡಿ ಧನ್ಯವಾದಗೈದರು. ಡಾ. ಹರ್ಷಿತಾ ಪೂಜಾರಿ ಮಾವೆ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆಯ ಬಳಿಕ ಮಕ್ಕಳಿಗೆ ವಿವಿಧ ಚಟುವಟಿಕೆಗಳು ನಡೆದಿದ್ದು, ಈ ಶಿಬಿರವು ಮುಂದಿನ ನಾಲ್ಕು ದಿನಗಳ ಕಾಲ ನಡೆಯಲಿದೆ. 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸಂಸ್ಕಾರ, ಸೃಜನಶೀಲತೆ, ಕಲೆ, ಕ್ರೀಡೆ ಸೇರಿದಂತೆ ಹಲವಾರು ಆಯಾಮಗಳಲ್ಲಿ ನುರಿತ ಮಾರ್ಗದರ್ಶನ ಲಭಿಸುವದು ಶಿಬಿರದ ವಿಶೇಷತೆ.

Leave a Comment