Coastal Bulletin

ಬಂಟ್ವಾಳ : ಯುವಕ ವೃಂದ ಮಂಚಿ ಕಟ್ಟೆ ಇದರ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯುವಕ ವೃಂದದ ನೂತನ ಕಟ್ಟಡ ಉದ್ಘಾಟನ ಸಮಾರಂಭ ಮಾ.12 ರಂದು ನಡೆಯಲಿದೆ.

ಬೆಳಿಗ್ಗೆ 6 ಗಂಟೆಗೆ ನೂತನ ಕಟ್ಟಡದಲ್ಲಿ ಗಣಹೋಮ  , ಬಳಿಕ ಮಂಜಿಕಟ್ಟೆಯ ಅಶ್ವಥ ಕಟ್ಟೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಿತ್ತಾಳ ಶ್ರೀ ರಾಘವ ಆಚಾರ್ಯ ದೀಪಪ್ರಜ್ವಲಿಸುವವರು. ಬೆಳಿಗ್ಗೆ 10 ರಿಂದ ಸತ್ಯನಾರಾಯಣ ಪೂಜೆ ಇರಲಿದೆ. ನಂತರ ಮಂಗಳಾರತಿ, ಪ್ರಸಾದ

ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6‌ ಗಂಟೆಯಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ‌ಕಾರ್ಯಕ್ರಮ ಇರಲಿದೆ.

ಸಂಜೆ 7 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದರು.

Leave a Comment