Coastal Bulletin

ಬಂಟ್ವಾಳ: ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಶುಕ್ರವಾರ ನಡೆದ ಸಾಂತ್ ಮೇರಿ ಹಬ್ಬದ ವೇಳೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವತಿಯಿಂದ ಹೊಸ ಓದುಗರಿಗೆ ವಾರ್ಷಿಕ ವಿಶೇಷ ಪ್ಯಾಕೇಜ್ ಸೌಲಭ್ಯಕ್ಕೆ ಫರಂಗಿಪೇಟೆ ಮೋಂತಿ ಮರಿನಾ ಕಾನ್ವೆಂಟ್ ಇದರ ಶ್ರೇಷ್ಟ ಧರ್ಮಗುರು ಜೆರಾಲ್ಡ್ ಲೋಬೋ ಚಾಲನೆ ನೀಡಿದರು. ಪಿಯೂಸ್ ಎಲ್.ರಾಡ್ರಿಗಸ್, ನವೀನ್ ಎಸ್.ಕೋಟ್ಯಾನ್ ಮತ್ತಿತರರು ಇದ್ದರು.

ರಾಜ್ಯದಲ್ಲಿ ಕಳೆದ 74 ವರ್ಷಗಳಿಂದ ಅತ್ಯಂತ ವಿಶ್ವಾಸಾರ್ಹ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಎಲ್ಲರಿಗೂ ಪಾರದರ್ಶಕ ಸುದ್ದಿ ನೀಡುವ ಮೂಲಕ ಪತ್ರಿಕಾಧರ್ಮ ಉಳಿಸಿಕೊಂಡಿರುವ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಓದುರನ್ನು ಸೆಳೆಯುವಂತಾಗಬೇಕು ಎಂದು ಪಾವೂರು ಉಳಿಯ ಚರ್ಚ್ ನ ಧರ್ಮಗುರು, ಫರಂಗಿಪೇಟೆ ಮೋಂತಿ ಮರಿನಾ ಕಾನ್ವೆಂಟ್ ಇದರ ಶ್ರೇಷ್ಟ ಧರ್ಮಗುರು ಜೆರಾಲ್ಡ್ ಲೋಬೋ ಹೇಳಿದ್ದಾರೆ. 

ಇಲ್ಲಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಶುಕ್ರವಾರ ನಡೆದ ಸಾಂತ್ ಮೇರಿ ಹಬ್ಬದ ವೇಳೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವತಿಯಿಂದ ಆಯೋಜಿಸಿದ್ದ 'ಮಾಸ್ಟರ್ ಮೈಂಡ್' ಸ್ಪರ್ದಾತ್ಮಕ ಪರೀಕ್ಷೆಗಳ ಆನ್ ಲೈನ್ ತರಬೇತಿ ಬಗ್ಗೆ ಮಾಹಿತಿ

ಮತ್ತು 'ಪ್ರಜಾವಾಣಿ -ಡೆಕ್ಕನ್ ಹೆರಾಲ್ಡ್' ದಿನಪತ್ರಿಕೆಗಳ ವಾರ್ಷಿಕ ವಿಶೇಷ ಪ್ಯಾಕೇಜ್ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಸಮಾಜ ಸೇವಕ ಅರುಣ್ ಮಾಡ್ತಾ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರೋಯ್ ಕಾಲರ್ೊ, ಶ್ರೀಹರಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ನವೀನ್ ಕೋಟ್ಯಾನ್ ಶುಭ ಹಾರೈಸಿದರು. 

ಲೊರೆಟ್ಟೋ ಚರ್ಚ್ ನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ, ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ, ಪ್ರಜಾವಾಣಿ ಪ್ರಸರಣಾ ವಿಭಾಗ ಮುಖ್ಯಸ್ಥ ಪ್ರಕಾಶ್ ನಾಯಕ್, ಮೇಲ್ವಿಚಾರಕರಾದ ಲಾರೆನ್ಸ್ ಕ್ರಾಸ್ತ, ಸುನಿಲ್ ಎಸ್.ಸಿ. ಇದ್ದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ ವಂದಿಸಿದರು.

Leave a Comment