ಬಂಟ್ವಾಳ: ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ಬಂಟ್ವಾಳ -ಇದರ ನೂತನ 10ನೇ ಶಾಖೆಯನ್ನು ಫಜೀರು ಗ್ರಾಮಚಾವಡಿಯ ಆಶೀರ್ವಾದ್ ಕಾಂಪ್ಲೆಕ್ಸ್ 1ನೇ ಮಹಡಿಯಲ್ಲಿ ಅ.13 ಆದಿತ್ಯವಾರ ದ ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಎನ್. ಮಂಗಳೂರು ಇವರು ಉದ್ಘಾಟಿಸಲಿದ್ದು, ಅನೇಕ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















