ಭಾರತ ದೇಶದ ಸದೃಢತೆಗೆ ಒಗ್ಗಟ್ಟಿನಿಂದ ಬಿಜೆಪಿಗೆ ಬೆಂಬಲ ನೀಡಿ: ಅಮ್ಮುಂಜೆ,ನಾಮಫಲಕ ಅನಾವರಣ ಕಾರ್ಯಕ್ರಮ ದಲ್ಲಿ ಶಾಸಕ ರಾಜೇಶ್ ನಾಯ್ಕ್ ಕರೆ

Coastal Bulletin
ಭಾರತ ದೇಶದ ಸದೃಢತೆಗೆ ಒಗ್ಗಟ್ಟಿನಿಂದ ಬಿಜೆಪಿಗೆ ಬೆಂಬಲ ನೀಡಿ: ಅಮ್ಮುಂಜೆ,ನಾಮಫಲಕ ಅನಾವರಣ ಕಾರ್ಯಕ್ರಮ ದಲ್ಲಿ ಶಾಸಕ ರಾಜೇಶ್ ನಾಯ್ಕ್ ಕರೆ

ಬಂಟ್ವಾಳ :ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿ ಭಾರತದ ಶಕ್ತಿಯಾಗಿದ್ದು, ಇದಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಕಾರ್ಯಕರ್ತರಿಂದ ಆಗಬೇಕು, ಭಾರತ ದೇಶದ ಸದೃಢತೆಗೆ ಒಗ್ಗಟ್ಟಿನಿಂದ ಬಿಜೆಪಿಗೆ ಬೆಂಬಲ ನೀಡಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಅಧ್ಯಕ್ಷರ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಶಾಸಕರು ಉಪಸ್ಥಿತರಿದ್ದರು.

ಅಮ್ಮುಂಜೆ ಗ್ರಾಮದಲ್ಲಿ ಬೂತ್ ಸಂಖ್ಯೆ 45 ರ ಅಧ್ಯಕ್ಷ ರವಿ ಸುವರ್ಣ, ಬೂತ್ ಸಂಖ್ಯೆ 43 ರ ಅಧ್ಯಕ್ಷ ಶೀನ ಬೆಳ್ಚಾಡ,ಬೂತ್ ಸಂಖ್ಯೆ 46 ರ ಅಧ್ಯಕ್ಷ ರವೀಂದ್ರ ಸುವರ್ಣ, ಬೂತ್ ಸಂಖ್ಯೆ 46 ರ ಅಧ್ಯಕ್ಷ ಹರೀಶ್ಚಂದ್ರ ಹೊಳೆಬದಿ, ಬೂತ್ ಸಂಖ್ಯೆ 47 ರ ಅಧ್ಯಕ್ಷ ಪುನೀತ್ ಶೆಟ್ಟಿ, ಬೂತ್ ಸಂಖ್ಯೆ 44 ರ ಅಧ್ಯಕ್ಷ ಸಂದೀಪ್ ಬೆಂಜನಪದವು ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ಅವರು ಬಂಟ್ವಾಳ ಬಿಜೆಪಿ ಮಂಡಲ ಪ್ರಮುಖರ ಜೊತೆಯಲ್ಲಿ ಅಧ್ಯಕ್ಷರ ಮನೆಗೆ ಬೇಟಿ ನೀಡಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಬೂತ್ ಅಧ್ಯಕ್ಷರಿಗೆ ಶಾಲು ಹೊದಿಸಿ ಗೌರವ ನೀಡಿ ನಾಮಫಲಕ ಅನಾವರಣ ಮಾಡಿದರು.

ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಬಂಟ್ವಾಳ ಬಿಜೆಪಿ ಕಾರ್ಯದರ್ಶಿಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು , ಗಣೇಶ್ ರೈ ಮಾಣಿ,ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ರವಿ ಪೂಜಾರಿ, ರೋನಾಲ್ಡ್ ಡಿ.ಸೋಜ, ಕಾರ್ತಿಕ್ ಬಲ್ಲಾಳ್, ಭಾಗೀರಥಿ, ಲೀಲಾವತಿ , ರಾಧಾಕೃಷ್ಣ ಭಟ್, ಲಕ್ಮೀ, ಲೀಲಾ, ಅಮ್ಮುಂಜೆ ಗ್ರಾಮದ ಪ್ರಭಾರಿ ದಾಮೋದರ ನೆತ್ತರಕೆರೆ, ಪ್ರಮುಖರಾದ ಜನಾರ್ಧನ ಬಾರಿಂಜ, ಪುನೀತ್ ಶೆಟ್ಟಿ , ಸುಧಾಕರ ಶೆಟ್ಟ, ಶೀನ ಕಲಾಯಿ, ಸುರೇಶ್ ಸಾಲಿಯಾನ್, ಸತ್ಯಪ್ರಸಾದ್ ಶೆಟ್ಟಿ, ಪ್ರಸಾದ್ ಕಣಿಯೂರು, ರಾಮಚಂದ್ರ ಆಚಾರ್ಯ, ಗುರುಪ್ರಸಾದ್,ಮಹೇಶ್ ಸಾಲಿಯಾನ್, ಈಶ್ವರ ಬೆಳ್ಚಾಡ, ಯೋಗೀಶ್ ಬೆಂಜನಪದವು, ಗಣೇಶ್ ಕಲಾಯಿ ಮತ್ತಿತರರು ಉಪಸ್ಥಿತರಿದ್ದರು.


Leave a Comment