ಬಂಟ್ವಾಳ :ರಿಕ್ಷಾ ಚಾಲಕ ಮಾಲಕ ಸಂಘದಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ.

Coastal Bulletin
ಬಂಟ್ವಾಳ :ರಿಕ್ಷಾ ಚಾಲಕ ಮಾಲಕ ಸಂಘದಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ.

ಬಂಟ್ವಾಳ: ತಾಲೂಕು ರಿಕ್ಷಾ ಚಾಲಕ ಮಾಲಕ ಸಂಘ (ಬಿಎಂಎಸ್)ದ ವತಿಯಿಂದ 3 ನೇ ವರ್ಷದ ಕಟೀಲು ಕ್ಷೇತ್ರಕ್ಕೆ ಕಾಲ್ನಡಿಗೆ ಯಾತ್ರೆಗೆ ಶನಿವಾರ ಸಂಜೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು.

ಸಂಘದ ಸದಸ್ಯರಾಗಿರುವ ಸುಮಾರು ನೂರು ಮಂದಿ ರಿಕ್ಷಚಾಲಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಭಾನುವಾರ ಮುಂಜಾನೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನವನ್ನು ತಲುಪಲಿದ್ದಾರೆ. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಎ. ಗೋವಿಂದ ಪ್ರಭು, ಅಧ್ಯಕ್ಷ ಸತೀಶ್ ಸಾಲ್ಯಾನ್, ಕಾರ್ಯದರ್ಶಿ ರವೀಂದ್ರ ಕೋಟ್ಯಾನ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಜಿಲ್ಲಾ ಜೊತೆ ಕಾರ್ಯದರ್ಶಿ ನಾರಾಯಣ ಕೆ. ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.


Leave a Comment