Coastal Bulletin

ಬಂಟ್ವಾಳ:ಇಲ್ಲಿನ ಬರಿಮಾರು ಸಮೀಪದ ಪಾಪೆತ್ತಿಮಾರು ಎಂಬಲ್ಲಿ ನೇತ್ರಾವತಿ ನದಿ ಪಕ್ಕದಲ್ಲೇ ಇರುವ ಕಿರು ಹೊಳೆಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ರಾಮಣ್ಣ ನಾಯ್ಕ ಎಂಬವರ ಪುತ್ರ ರಕ್ಷಣ್ (16) ಎಂದು ಗುರುತಿಸಲಾಗಿದೆ. ಸ್ಥಳೀಯ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ರಕ್ಷಣ್ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಗೆ ಸಮೀಪದಲ್ಲೇ ಇರುವ ಕಿರು ಹೊಳೆಗೆ ಇಳಿದಾಗ ಈ

ಘಟನೆ ನಡೆದಿದೆ. ಈ ಘಟನೆ ನಡೆದು ಕೆಲಹೊತ್ತಿನ ಬಳಿಕ ವಿಷಯ ತಿಳಿದ ಸ್ಥಳೀಯರು ಆತನನ್ನು ಮೇಲೆತ್ತಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದಾಗ ಬಾಲಕ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕನಿಗೆ ತಂದೆ, ತಾಯಿ ಮತ್ತು ಇಬ್ಬರು  ಸಹೋದರಿಯರು ಇದ್ದಾರೆ. 

Leave a Comment