ಮೂಡುಬಿದಿರೆ :ವಿಶ್ರಾಂತ ಉಪ ತಹಶೀಲ್ದಾರ್ ರಂಗಕರ್ಮಿ, ಲಾಡಿ ನಿವಾಸಿ ನಾರಾಯಣ ರಾವ್ ( 82 ವರ್ಷ) ಅಲ್ಪಕಾಲದ ಅಸೌಖ್ಯದಿಂದ ರವಿವಾರ (ಮೇ8 )ನಿಧನಹೊಂದಿದರು. ಅವರು ಪತ್ನಿ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಯಾಗಿ ಸುಳ್ಯದಲ್ಲಿ ಸೇವೆಗೆ ಸೇರಿಕೊಂಡ ಅವರು ನಾಲ್ಕು ದಶಕಗಳ ಅವಧಿಯಲ್ಲಿ ದ.ಕ ಜಿಲ್ಲಾಡಳಿತದಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಉಪ ತಶಿಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಜಿಲ್ಲಾ ಸರಕಾರಿ ತರಬೇತಿ ಕೇಂದ್ರದಲ್ಲಿ ಬೋಧಕರಾಗಿ ನಿವೃತ್ತರಾಗಿದ್ದರು .
ವೀರಪ್ಪಮೊಯ್ಲಿ ,ಅಮರನಾಥ ಶೆಟ್ಟಿಯವರು ಸಚಿವರಾಗಿದ್ದ ಸಂದರ್ಭದಲ್ಲಿ ಸ್ಥಳೀಯವಾಗಿ ಜಿಲ್ಲಾಮಟ್ಟದಲ್ಲಿ ಅವರ ಆಪ್ತ ಕಾರ್ಯದರ್ಶಿ ನೆಲೆಯಲ್ಲಿ ಸೇವೆ ಸಲ್ಲಿಸಿದ್ದ ನಾರಾಯಣರಾವ್
ಹೀಗೆ ಅನೇಕ ಸಚಿವರುಗಳಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ಸಹಾಯಕ ಅಧಿಕಾರಿಯಾಗಿದ್ದರು .
ನಿವ್ರತ್ತಿಯ ನಂತರ ಬಲ್ಲಾಳ್ ನರ್ಸಿಂಗ್ ಕಾಲೇಜಿನಲ್ಲಿ 14 ವರ್ಷ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಮೂಡುಬಿದಿರೆಯಲ್ಲಿ 60ರ ದಶಕದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಕಟ್ಟಿ ಬೆಳೆಸಿದ ನೂತನ ಕಲಾವೃಂದ ದಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದ ಅವರು ಸ್ಥಳೀಯ ಪಿಂಚಣಿದಾರರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ .














