ಪೊಳಲಿ :ಎಸ್ ಆರ್ ಹಿಂದೂ ಫ್ರೆಂಡ್ಸ್ ಅಶ್ರಯದಲ್ಲಿ ರಕ್ತದಾನ ಶಿಬಿರ.

Coastal Bulletin
ಪೊಳಲಿ :ಎಸ್ ಆರ್ ಹಿಂದೂ ಫ್ರೆಂಡ್ಸ್ ಅಶ್ರಯದಲ್ಲಿ ರಕ್ತದಾನ ಶಿಬಿರ.

ಬಂಟ್ವಾಳ :ಸುಮಾರು 11ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಶೈಕ್ಷಣಿಕ ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಸುಮಾರು 45 ಲಕ್ಷದಷ್ಟು ಹಣವನ್ನ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಾ ಬಂದಿರುವ ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ ಸೇವಾ ಸಂಸ್ಥೆಯು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ  ರಕ್ತದಾನ ಶಿಬಿರವನ್ನು  ಇತ್ತೀಚೆಗೆ ಆಯೋಜಿಸಿತು.

 ಉದ್ಘಾಟನೆಯನ್ನು ಸಿ. ಎ ಶಾಂತರಾಮ ಶೆಟ್ಟಿ ಉದ್ಘಾಟಿಸಿದರು, ಸಭಾಧ್ಯಕ್ಷತೆಯನ್ನು ಅಜಿತ್ ಪೊಳಲಿ ವಹಿಸಿಕೊಂಡರು, ಮುಖ್ಯ ಅತಿಥಿಗಳಾಗಿ ಭುವನೇಶ್ ಪಚ್ಚಿನಡ್ಕ, ಸುಕೇಶ್ ಚೌಟ, ಕಿಶೋರಚಂದ್ರ

ಹೆಗ್ಡೆ, ಕೆ ಪಿ ಚಂಧ್ರಮೋಹನ್, ವಿಜೆ ವಿಖ್ಯಾತ್, ಸಂತೋಷ್ ಶೆಟ್ಟಿ, ಯಶವಂತ ಪೊಳಲಿ, ರಾಜೇಶ್ ಪಡ್ಪು ಉಪಸ್ಥಿತರಿದ್ದರು.

ಸಂಘಟಕ ಜನಾರ್ಧನ ಅಮುಂಜೆ ಕಾರ್ಯಕ್ರಮ ನಿರೂಪಿಸಿದರು.


Leave a Comment